ಕನ್ನಡದಲ್ಲಿ ಮೊದಲ ಐಎಎಸ್ ಪಡೆದ ಕೆ. ಶಿವರಾಮ್ ಇನ್ನಿಲ್ಲ

ಕನ್ನಡದಲ್ಲಿ ಮೊದಲ ಐಎಎಸ್ ಪಡೆದ ಕೆ. ಶಿವರಾಮ್ ಇನ್ನಿಲ್ಲ

ಬೆಂಗಳೂರು, ಫೆ. 29 – ಕನ್ನಡದಲ್ಲಿಯೇ ಐ.ಎ.ಎಸ್. ಪರೀಕ್ಷೆ ಬರೆದು ಉತ್ತೀರ್ಣರಾಗಿ ದ್ದ ಮೊದ ಲಿಗ ಹಾಗೂ ನಟ ಕೆ. ಶಿವರಾಮ್ ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು.

ಅನಾರೋಗ್ಯದ ಕಾರಣದಿಂದ ಅವರು ಕಳೆದ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿದ್ದರು. ಸಂಜೆ 4.15ರ ಸಮಯದಲ್ಲಿ ಹೃದಯಾಘಾ ತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಅಳಿಯ ಪ್ರದೀಪ್ ತಿಳಿಸಿದ್ದಾರೆ.

ನಾಳೆ ರವೀಂದ್ರ ಕಲಾಕ್ಷೇತ್ರದಲ್ಲಿ ಮೃತರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಪ್ರದೀಪ್ ಹೇಳಿದ್ದಾರೆ.

1953ರಲ್ಲಿ ನಾಟಕ ಮಾಸ್ಟರ್ ಕೆಂಪಯ್ಯ ಹಾಗೂ ಚಿಕ್ಕಬೋರಮ್ಮ ದಂಪತಿಯ ಪುತ್ರನಾಗಿ ರಾಮನಗರ ಜಿಲ್ಲೆಯ ಉರುಗಹಳ್ಳಿಯಲ್ಲಿ ಜನಿಸಿದ್ದ ಶಿವರಾಮ್, ಅಧಿಕಾರಿಯಾಗಿ ಹಾಗೂ ಚಿತ್ರರಂಗದಲ್ಲಿ ಹೆಸರು ಮಾಡಿದ್ದರು. ಆದರೆ, ರಾಜಕೀಯದಲ್ಲಿ ಅದೇ ರೀತಿಯ ಯಶಸ್ಸು ಅವರಿಗೆ ಒಲಿಯಲಿಲ್ಲ.

1972ರಲ್ಲಿ ಸರ್ಕಾರಿ ಉದ್ಯೋಗ ಸೇರಿದ್ದ ಶಿವರಾಮ್, ಉದ್ಯೋಗದಲ್ಲಿದ್ದುಕೊಂಡೇ ಬಿ.ಎ. ಹಾಗೂ ಎಂ.ಎ. ಪದವಿ ಪಡೆದಿದ್ದರು. 1986ರಲ್ಲಿ ಅವರು ಕನ್ನಡದಲ್ಲಿ ಐ.ಎ.ಎಸ್. ಪರೀಕ್ಷೆ ಪೂರ್ಣಗೊಳಿಸಿದ ಮೊದಲ ವ್ಯಕ್ತಿಯಾಗಿ ಇತಿಹಾಸ ಸೃಷ್ಟಿಸಿದ್ದರು.

1993ರಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ §ಬಾ ನಲ್ಲೆ ಮಧುಚಂದ್ರಕೆ¬ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟ ಚಲನಚಿತ್ರ. ‘ವಸಂತ ಕಾವ್ಯ’, ‘ಪ್ರತಿಭಟನೆ’, ‘ಯಾರಿಗೆ ಬೇಡ ದುಡ್ಡು’ ಮುಂತಾದ ಚಿತ್ರಗಳಲ್ಲೂ ಅವರು ನಟಿಸಿದ್ದರು.

2013ರಲ್ಲಿ ಬೆಂಗಳೂರು ಪ್ರಾದೇಶಿಕ ಆಯುಕ್ತರಾಗಿದ್ದ ಅವರು ಸ್ವಯಂ ನಿವೃತ್ತಿ ಪಡೆದು ರಾಜಕೀಯ ಸೇರಿದರು. ಮೊದಲು ಕಾಂಗ್ರೆಸ್‌ನಲ್ಲಿದ್ದ ಅವರು, 2014ರಲ್ಲಿ ಜೆಡಿಎಸ್‌ನಿಂದ ಲೋಕಸಭಾ ಚುನಾವಣೆಯಲ್ಲಿ ವಿಜಯಪುರ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ನಂತರ ಬಿಜೆಪಿಗೆ ಸೇರ್ಪಡೆಯಾಗಿದ್ದರು.

error: Content is protected !!