ಹೊನ್ನಾಳಿ : ಯಕ್ಷಗಾನ ಪ್ರದರ್ಶನ

ಹೊನ್ನಾಳಿ,  ಫೆ. 28 – ತೀರ್ಥಹಳ್ಳಿ ತಾಲ್ಲೂಕಿನ ಶ್ರೀ ಕ್ಷೇತ್ರ ಅಲಸೆ ಶ್ರೀ ಚೆಂಡಿಕೇಶ್ವರ, ಶ್ರೀಶಂಕರೇಶ್ವರ ಕೃಪೆಯಿಂದ ಶ್ರೀನಾಗೇಶ್ವರಿ, ಶ್ರೀಸುಬ್ರಮಣ್ಯ ಕೃಪಾಶೀರ್ವಾದದಿಂದ, ಯಕ್ಷಗಾನ ಮೇಳದಿಂದ, ಶ್ರೀ ಚಂದ್ರಹಾಸ ಚರಿತ್ರೆಯ ಯಕ್ಷಗಾನ ಪ್ರದರ್ಶನ ಮಾರ್ಚ್‌ 1 ರ ಶುಕ್ರವಾರ ಪಟ್ಟಣದ ಶ್ರೀ ದುರ್ಗಮ್ಮ-ಮರಿಯಮ್ಮ ದೇವಸ್ಥಾನದ ಆವರಣದಲ್ಲಿ  ರಾತ್ರಿ 7 ಗಂಟೆಯಿಂದ 12.30ರ ವರೆಗೆ ನಡೆಯಲಿದೆ ಎಂದು ಹಾಲಮತ ಸಮಾಜದ ತಾಲ್ಲೂಕು ಅಧ್ಯಕ್ಷೆ ಪಂಕಜ ಅರುಣುಕುಮಾರ ತಿಳಿಸಿದ್ದಾರೆ.

ಪಟ್ಟಣದ ದುರ್ಗಮ್ಮ-ಮರಿಯಮ್ಮ ದೇವಸ್ಥಾನದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಶ್ರೀಕ್ಷೇತ್ರ ಅಲಸೆ ಧರ್ಮದರ್ಶಿ ಚಿದಂಬರ ಭಟ್ ಗೌರವ ವ್ಯವಸ್ಥಾಪಕರು, ಶಿವಶಂಕರಭಟ್ ಗುಡ್ಡೆಪಾಲ್, ಇವರಿಂದ ಈಗಾಗಲೇ ಪಟ್ಟಣದ ಕನಕ ರಂಗಮಂದಿರದಲ್ಲಿ 2 ವರ್ಷ, ಹೊಸಕೇರಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಯಕ್ಷಗಾನ ಪ್ರದರ್ಶನ ನಡೆದು ಈ ವರ್ಷ ಶ್ರೀ ದುರ್ಗಮ್ಮ-ಮರಿಯಮ್ಮ ದೇವಸ್ಥಾನ ಆವರಣದಲ್ಲಿ  ನಡೆಯಲಿದೆ. ರಂಗ ವೈಭವ ಸಾಕ್ಷಾಧಾರಿತ ಕಲಾವಿದರಿಂದ ಶ್ರೀ ಚಂದ್ರಯಾನ ಚರಿತ್ರೆ ಯಕ್ಷಗಾನ ಪ್ರದರ್ಶನ ನಡೆಯಲಿದೆ, ಶ್ರೀ ನಾಗೇಶ್ವರಿ ಅಮ್ಮನವರಿಗೆ ಉಡಿ ತುಂಬುವ ವಿಶೇಷ ಕಾರ್ಯಕ್ರಮ ನಡೆಯಲಿದೆ. 

ಪತ್ರಿಕಾಗೋಷ್ಠೀಯಲ್ಲಿ ನರಸಿಂಹಪ್ಪ, ಅರುಣಕುಮಾರ, ಸಂಜೀವ್, ಹರೀಶ್‍ ಅಕ್ಕಿ, ಸಿದ್ದೇಶ್, ರುದ್ರೇಶ್, ಮೊದಲಂಕಿಕುಮಾರ, ರವಿ, ಚನ್ನಪ್ಪ ಕಾಯಿ ಬುರುಡೆ ಇತರರು ಇದ್ದರು.

error: Content is protected !!