ಇನ್ನರ್‌ವ್ಹೀಲ್‌ನಿಂದ 4ರಂದು ಮಹಿಳೆಯರಿಗೆ ಸ್ಪರ್ಧೆಗಳು

ದಾವಣಗೆರೆ, ಫೆ. 27- ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಇನ್ನರ್ ವ್ಹೀಲ್ ಸಂಸ್ಥೆ ವಿದ್ಯಾನಗರ  ವತಿಯಿಂದ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಮಾಗನೂರು ಬಸಪ್ಪ ರೋಟರಿ ಭವನದಲ್ಲಿ ಬರುವ ಮಾರ್ಚ್ 4ರ ಸೋಮವಾರ ಬೆಳಿಗ್ಗೆ 11ಗಂಟೆಗೆ ನಡೆಯಲಿದೆ. ವಿವಾಹ ವಿಚ್ಛೇದನ ಸಾಧಕ, ಬಾಧಕಗಳು ಹಾಗೂ  ಭಾರತದ ಪ್ರಪ್ರಥಮ ಸಾಧಕ ಮಹಿಳೆಯರು ವಿಷಯವಾಗಿ ಚರ್ಚಾ ಸ್ಪರ್ಧೆ ನಡೆಯಲಿದ್ದು, ಆಸಕ್ತರು ಮಂಜುಳಾ ಕರ್ಜಿಗಿ (94826 00894), ಪ್ರೇಮಾ ಮಹೇಶ್ವರಪ್ಪ (94810 10502), ವಿಜಯಾ ಕಡೇಕೊಪ್ಪ (94495 02623) ಇವರಲ್ಲಿ ಹೆಸರು ನೋಂದಾಯಿಸಬಹುದಾಗಿದೆ.

error: Content is protected !!