ಶ್ರೀ ಗಣಪತಿ, ಶ್ರೀ ಶಾರದಾಂಬಾ, ಶ್ರೀ ಚಂದ್ರಮೌಳೀಶ್ವರ ಮತ್ತು ಶ್ರೀ ಶಂಕರಾಚಾರ್ಯರ ದೇವಸ್ಥಾನಗಳ ವಾರ್ಷಿಕೋತ್ಸವದ ಅಂಗವಾಗಿ ವಿಶೇಷ ಕಾರ್ಯಕ್ರಮಗಳನ್ನು ಇಂದು ಮತ್ತು ನಾಳೆ ಏರ್ಪಡಿಸಲಾಗಿದೆ.
ಇಂದು ಬೆಳಗ್ಗೆ 7.30ಕ್ಕೆ ಕಲಶಸ್ಥಾಪನೆ, ಅಭಿಷೇಕ, ಶ್ರೀ ಶಾರದಾಂಬಾ ಮೂರ್ತಿಗೆ ಸಹಸ್ರ ನಾಮಾರ್ಚನೆ, ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ ನಡೆಯಲಿದೆ. ಸಂಜೆ 6ಕ್ಕೆ ಶ್ರೀ ಶಂಕರ ಸಮುದಾಯ ಭವನದಲ್ಲಿ ವಿದ್ವಾನ್ ಚಿ. ವಿಶ್ವಂಬರ ಭಾಗವತ ಮತ್ತು ವೃಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಸಿಕೊಡುವರು. ಸಂಜೆ 7.30ಕ್ಕೆ ಶ್ರೀಶಾರದಾಂಬಾ ದೇವಿಗೆ ಪಾಲಕಿ ಉತ್ಸವ ಜರುಗಲಿದೆ.
ನಾಳೆ ಮಂಗಳವಾರ 27ರಂದು ಬೆಳಗ್ಗೆ 7ಕ್ಕೆ ಕಲಾ ಹೋಮ, 9 ಗಂಟೆಗೆ ಪೂರ್ಣಾಹುತಿ. 9.30ರಿಂದ ವಿಶೇಷ ಪೂಜೆಗಳು, ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಸಂಜೆ 6ಕ್ಕೆ ಶ್ರೂಫಲ್ಗುಣಿ ಕಲಾತಂಡದಿಂದ ಶ್ರೀಚಕ್ರ ಮಹಿಮೆ ರೂಪಕ ಪ್ರದರ್ಶನಗೊಳ್ಳಲಿದೆ. 7 ಗಂಟೆಗೆ ಶ್ರೀ ಶಾರದಾಂಬಾ ದೇವಿಗೆ ಪಾಲಕಿ ಉತ್ಸವ ರಥ ಸೇವಾ, ಅಷ್ಟಾವಧಾನ ಕಾರ್ಯಕ್ರಮಗಳು ನಡೆಯಲಿವೆ.