ದಾವಣಗೆರೆ, ಫೆ.25- ಬರುವ ಮಾರ್ಚ್ 4 ರಂದು ನಡೆಯುವ ಕೊಟ್ಟೂರು ಶ್ರೀ ಗುರು ಬಸವೇಶ್ವರ ರಥೋತ್ಸವಕ್ಕೆ ತೆರಳುವ ಪಾದಯಾತ್ರಿಗಳಿಗೆ ಕೊಟ್ಟೂರು ಶ್ರೀ ಗುರುಬಸವರಾಜೇಂದ್ರ ಸ್ವಾಮಿ ಪಾದಯಾತ್ರೆ ಟ್ರಸ್ಟ್ ವತಿಯಿಂದ ಮಾರ್ಚ್ 1ರ ಶುಕ್ರವಾರ ಸಂಜೆ 6 ಗಂಟೆಗೆ ನಗರದಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ಕೈಗಾರಿಕೋದ್ಯಮಿಯೂ ಆದ ಟ್ರಸ್ಟ್ ಗೌರವಾಧ್ಯಕ್ಷ ಅಥಣಿ ಎಸ್. ವೀರಣ್ಣ ತಿಳಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಬ್ಬಾಳು ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಮಹಾಸ್ವಾಮೀಜಿ, ಕೂಡ್ಲಿಗೆ ಅಯ್ಯನಹಳ್ಳಿ ಹಿರೇಮಠದ ಶ್ರೀ ಮಹೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ, ಕೊಟ್ಟೂರು ಮಹಲ್ ಮಠದ ಶ್ರೀ ಶಂಕರ ಸ್ವಾಮೀಜಿ, ಕೋಣಂದೂರು ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.
ಮಾರ್ಚ್ 2ರಂದು ಶನಿವಾರ ಸಂಜೆ ಅರಸೀಕೆರೆ ಶ್ರೀ ಗುರು ಕೋಲಶಾಂತೇಶ್ವರ ವಿರಕ್ತಮಠದಲ್ಲಿ 26ನೇ ವರ್ಷದ ಔಷಧೋಪಚಾರ ಸೇವೆಯ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್‌ನ ಅಧ್ಯಕ್ಷ ಕಣಕುಪ್ಪಿ ಮುರುಗೇಶಪ್ಪ, ಉಪಾಧ್ಯಕ್ಷ ಆರ್.ಜಿ. ದತ್ತರಾಜ್, ಖಜಾಂಚಿ ಮಲ್ಲಾಬಾದಿ ಗುರು ಬಸವರಾಜ್, ಸಹ ಕಾರ್ಯದರ್ಶಿ ಬಿ.ಚಿದಾನಂದ, ಸಂಚಾಲಕ ಜಿ.ಕೆ. ನಾಗರಾಜ್, ನಿರ್ದೇಶಕರುಗಳಾದ ಎ.ಎಸ್. ಮೃತ್ಯುಂಜಯ, ಸಿ.ಆರ್. ಜಯರಾಜ್, ಬೂಸ್ನೂರು ಸುಜಾತಮ್ಮ, ವಿನುತ ರವಿಕುಮಾರ್, ಜೋಳದ ಕೊಟ್ರಪ್ಪ, ಪ್ರಭಾಕರ ಸ್ವಾಮಿ ಉಪಸ್ಥಿತರಿದ್ದರು.