ಶ್ರೀ ಅಕ್ಕಮಹಾದೇವಿ ಮಹಿಳಾ ಸಮಾಜದ ವತಿಯಿಂದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಇಂದು ಸಂಜೆ 5.30ಕ್ಕೆ ಹುಣ್ಣಿಮೆ ಕಾರ್ಯಕ್ರಮ ನಡೆಯಲಿದೆ.
ಶ್ರೀ ಅಕ್ಕಮಹಾದೇವಿ ಮಹಿಳಾ ಸಮಾಜದ ಅಧ್ಯಕ್ಷರಾದ ಶ್ರೀಮತಿ ಕೆ.ಕೆ. ಸುಶೀಲಮ್ಮ ಅಧ್ಯಕ್ಷತೆ ವಹಿಸಲಿದ್ದು, ಚಿಂತಕರಾದ ಶ್ರೀಮತಿ ನೀಲಗುಂದ ಜಯಮ್ಮ ಚಿಂತನ-ಮಂಥನ ಕಾರ್ಯಕ್ರಮವನ್ನು ನಡೆಸಿಕೊಡುವರು. ಕಾರ್ಯದರ್ಶಿ ಶ್ರೀಮತಿ ಸುವರ್ಣ ದೊಗ್ಗಳ್ಳಿ ಮತ್ತು ಪದಾಧಿಕಾರಿಗಳು ಉಪಸ್ಥಿತರಿರುವರು. ಶಿವಾಜಿ ಜಯಂತಿ, ರಥಸಪ್ತಮಿ ಮತ್ತು ಭಾರತ ಹುಣ್ಣಿಮೆ ವಿಷಯಗಳ ಕುರಿತು ಶ್ರೀಮತಿ ಸುಧಾ ಅಜ್ಜಂಪುರ, ಶ್ರೀಮತಿ ಶೋಭಾ ಕಣವಿ, ಶ್ರೀಮತಿ ಆಶಾ ಚಟ್ರಿಕೆ ಅವರುಗಳು ವಿಚಾರ ವಿನಿಮಯ ನಡೆಸುವರು.