ದಾವಣಗೆರೆ, ಫೆ. 23- ಪ್ರಥಮ ವರ್ಷದ ವೈದ್ಯಕೀಯ ವಿದ್ಯಾಭ್ಯಾಸಿಗಳಾಗಿದ್ದು, ಸರ್ಕಾರಿ ಕೋಟಾದಲ್ಲಿ ಸ್ಥಾನ ಗಳಿಸಿ ವಿದ್ಯಾಭ್ಯಾಸ ಮಾಡುತ್ತಿರುವ ರಾಜ್ಯಮಟ್ಟದ ಸಾಧು ಲಿಂಗಾಯತ ಸಮಾಜದ ಆರ್ಥಿಕ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಐದು ವರ್ಷದ ಅಧ್ಯಯನದ ಅವಧಿಗೆ ಆರ್ಥಿಕ ನೆರವು ನೀಡಲು ಸಾದರ ನೌಕರರ ಬಳಗ ಮುಂದಾಗಿದೆ. ಸಾಧು ಲಿಂಗಾಯತ ಸಮಾಜದ ವಿದ್ಯಾರ್ಥಿಗಳು ಇದೇ ದಿನಾಂಕ 28 ರೊಳಗಾಗಿ ಅಗತ್ಯ ದಾಖಲೆಗಳೊಂದಿಗೆ ಕೆ. ನಾಗಪ್ಪ, ಅಧ್ಯಕ್ಷರು, ಸಾದರ ನೌಕರರ ಬಳಗ, ಸಾದರ ಪತ್ತಿನ ಸಹಕಾರ ಬ್ಯಾಂಕ್, 2 ನೇ ಮಹಡಿ, 2000/ಎ-28, 16 ನೇ ತಿರುವು, ತರಳಬಾಳು ಬಡಾವಣೆ, ವಿದ್ಯಾನಗರ ಮುಖ್ಯರಸ್ತೆ, ದಾವಣಗೆರೆ ಇವರಿಗೆ ಸಲ್ಲಿಸಬಹುದು. ವಿವರಕ್ಕೆ ಸಂಪರ್ಕಿಸಿ 7829043544, 9844501366, 9886339984, 9844369744.
January 12, 2025