ಭಗವತಿ ಚೈತನ್ಯ ಚಿಕಿತ್ಸೆ ಮತ್ತು ಧ್ಯಾನ ಕೇಂದ್ರದ ಆಶ್ರಯದಲ್ಲಿ ಇಂದು ಮತ್ತು ನಾಳೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಮಹಾ ಧ್ಯಾನ ಉತ್ತಮ ಆರೋಗ್ಯಕ್ಕೆ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಶಿಬಿರ ನಡೆಸಿಕೊಡುವ ಸಂಸ್ಥೆಯ ಸಂಸ್ಥಾಪಕರಾದ ಹಿಮಾಲಯ ಯೋಗಿಗಳಾದ ಅಘೋರಿ ಚಿದಂಬರ ಯೋಗಿ ತಿಳಿಸಿದ್ದಾರೆ. ಎಂ.ಸಿ.ಸಿ. `ಬಿ’ ಬ್ಲಾಕ್‍ನ 2ನೇ ಮುಖ್ಯ ರಸ್ತೆ, 1ನೇ ತಿರುವಿನಲ್ಲಿರುವ ಡಾ. ಎಲಿ ಕ್ಲಿನಿಕ್ ಕಟ್ಟಡದ ಮೊದಲನೇ ಮಹಡಿಯ ಸಭಾಂಗಣದಲ್ಲಿ ನಡೆಯಲಿರುವ ಒಳ್ಳೆಯ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ಈ ಶಿಬಿರದಲ್ಲಿ ಭಾಗವಹಿಸುವವರು 9380389236, 9742829076 ಈ ಸನೀಹವಾಣಿಗಳಿಗೆ ಸಂಪರ್ಕಿಸಿ ಹೆಸರು ನೊಂದಾಯಿಸಬಹುದು.
January 10, 2025