ದಾವಣಗೆರೆ, ಫೆ.23- ದಾವಣಗೆರೆ ಅಸೋಸಿಯೇಷನ್ ಆಫ್ ಬಾಡಿ ಬಿಲ್ಡರ್ಸ್ ಹಾಗೂ ಬಿಲಾಲ್ ಮತ್ತು ಟೀಮ್ ಬ್ರದರ್ಸ್ ಸಂಯುಕ್ತಾಶ್ರಯದಲ್ಲಿ ನಾಳೆ ದಿನಾಂಕ 24ರ ಶನಿವಾರ ಸಂಜೆ 5 ಗಂಟೆಗೆ `ಬ್ರದರ್ಸ್ ಕ್ಲಾಸಿಕ್ 2024′ ಅಂತರ್ ಜಿಲ್ಲಾ ಮಟ್ಟದ ತೂಕ ವಿಭಾಗದ ದೇಹದಾರ್ಢ್ಯ ಸ್ಪರ್ಧೆ ನಡೆಯಲಿದೆ.
ಶುಕ್ರವಾರ ಈ ವಿಷಯ ಕುರಿತು ಮಾಹಿತಿ ನೀಡಿದ ಆಯೋಜಕ ಬಿಲಾಲ್, ವಿನೋಬನಗರದ ಅಮಿತ್ ಥಿಯೇಟರ್ ಆವರಣದಲ್ಲಿ ನಡೆಯುವ ಈ ಸ್ಪರ್ಧೆಯಲ್ಲಿ ವಿವಿಧ ಜಿಲ್ಲೆಗಳಿಂದ 80-100 ಜನರು ಆಗಮಿಸುವ ನಿರೀಕ್ಷೆ ಇದೆ. ವಿಜೇತರಿಗೆ ಆಕರ್ಷಕ ಟ್ರೋಫಿಯೊಂದಿಗೆ 1,11,111 ರೂ.ವರೆಗೂ ನಗದು ಬಹುಮಾನ ನೀಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ದಾವಣಗೆರೆ ಅಸೋಸಿಯೇಷನ್ ಆಫ್ ಬಾಡಿ ಬಿಲ್ಡರ್ಸ್ ಅಧ್ಯಕ್ಷ ಮಹೇಶ್ ಕೆ.ಎಂ., ಪ್ರಧಾನ ಕಾರ್ಯದರ್ಶಿ ಸಂತೋಷ್ ಏಕಬೋಟೆ ಸೇರಿದಂತೆ ಸುಲ್ತಾನ್ ಅಹ್ಮದ್, ಎಂ.ಜಾಫರ್ ಸಾಧಿಕ್, ನದೀಮ್ ಖಾನ್ ಇತರರು ಉಪಸ್ಥಿತರಿದ್ದರು.