ಸಿರಿಗೆರೆಯಲ್ಲಿ ಇಂದಿನಿಂದ ತರಳಬಾಳು ಹುಣ್ಣಿಮೆ ಮಹೋತ್ಸವ

ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಸಿರಿಗೆರೆ ಇವರ ವತಿ ಯಿಂದ ಇಂದಿನಿಂದ  ಮೂರು ದಿನ `ತರಳಬಾಳು ಹುಣ್ಣಿಮೆ ಮಹೋತ್ಸವ’ ಜರುಗಲಿದೆ.

ಇಂದು ಸಂಜೆ 6 ಗಂಟೆಗೆ ಯುವ ಚಿಂತನ ಗೋಷ್ಠಿ ಹಮ್ಮಿಕೊಂಡಿದ್ದು, ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ  ಸಾನ್ನಿಧ್ಯ ವಹಿಸಲಿದ್ದು, ವಿಜಯಪುರ ಜ್ಞಾನ ಯೋಗಾ ಶ್ರಮದ ಅಧ್ಯಕ್ಷರಾದ ಶ್ರೀ ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಶಾಸಕರುಗಳಾದ ಎಂ. ಚಂದ್ರಪ್ಪ, ಹೆಚ್.ಡಿ ತಮ್ಮಯ್ಯ, ಬಿ.ಪಿ.ಹರೀಶ್, ಬಿ. ದೇವೇಂದ್ರಪ್ಪ, ಹಂಪಿ ಕನ್ನಡ ವಿವಿ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ, ಆಹಾರ ನಾಗರಿಕ, ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ಆರ್.ಜಿ.ಮುಕುಂದಸ್ವಾಮಿ ಭಾಗವಹಿಸಲಿದ್ದಾರೆ.

ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ್ `ನಿತ್ಯ ಜೀವನದಲ್ಲಿ ಹಾಸ್ಯ’ ಕುರಿತು, ಯುಎಸ್‌ಎ ಶಿಕಾಗೋದ ಡಾ. ಅಣ್ಣಾಪುರ ಶಿವಕುಮಾರ್ `ವಿದೇಶದಲ್ಲಿ ಕನ್ನಡದ ಕಂಪು’ ಕುರಿತು ಮಾತನಾಡಲಿದ್ದಾರೆ. 

ಇದೇ ವೇಳೆ ಮಹದೇವ ಬಣಕಾರರ `ವಿಶ್ವಬಂಧು ಮರುಳಸಿದ್ಧ ಕಾವ್ಯ’, ನಿದಿಗೆ ಪಂಡಿತ ವಿಶ್ವಕುಮಾರ ಶರ್ಮಾ ಅವರ `ಮರುಳಸಿದ್ಧಾಂಕ ವಿಮರ್ಶೆ’ , ಡಾ. ವೀರಣ್ಣ ರಾಜೂರ ಮತ್ತು ಪ್ರೊ. ಕಾಶೀ ಸೋಮರಾಧ್ಯ ಅವರ `ಶರಣರ ನುಡಿಮುತ್ತುಗಳು’, ಲಿಂಗಾರೆಡ್ಡಿ ಶೇರಿ ಅವರ `ವಿಶ್ವಬಂಧು ಮರುಳಸಿದ್ಧ ಕಾವ್ಯ ದರ್ಪಣ’ ಪುಸ್ತಕಗಳು ಲೋಕಾರ್ಪಣೆಗೊಳ್ಳಲಿವೆ.

error: Content is protected !!