28ರಂದು ಆವರಗೊಳ್ಳ ಜಾತ್ರೆ

28ರಂದು ಆವರಗೊಳ್ಳ ಜಾತ್ರೆ

ದಾವಣಗೆರೆ, ಫೆ.20- ಇದೇ ದಿನಾಂಕ 28 ರಂದು ಸಂಜೆ 6ಗಂಟೆಗೆ ತಾಲ್ಲೂಕಿನ  ಆವರಗೊಳ್ಳದ ಶ್ರೀವೀರಭದ್ರೇಶ್ವರ ಸ್ವಾಮಿ ಮಹಾ ರಥೋತ್ಸವ ನಡೆಯಲಿದೆ ಎಂದು ಶ್ರೀ ವೀರಭದ್ರೇಶ್ವರ ಮಹಾಸ್ವಾಮಿ ಸೇವಾ ಸಂ ಘದ ಅಧ್ಯಕ್ಷ ಬಿ.ಎಂ. ಷಣ್ಮುಖಯ್ಯ ತಿಳಿಸಿದ್ದಾರೆ.

ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ದಿನಾಂಕ 23ರಿಂದ ಮಾರ್ಚ್ 2ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಫೆ.23ರಂದು ನಂದಿ ಧ್ವಜಾರೋಹಣದ ನಂತರ ಸ್ವಾಮಿಯ ಮೆರವಣಿಗೆ, ಹರಿದ್ರಾಲೇಪನ, ಕಂಕಣಧಾರಣೆ ನೆರವೇರಲಿದೆ. ಫೆ. 24ರಂದು ಬಸವೇಶ್ವರ ಆರೋಹಣ ಉತ್ಸವ, ಫೆ. 25ರಂದು ಸರ್ಪಾರೋಹಣ ಉತ್ಸವ,  ಇದೇ ದಿನಾಂಕ 26ರಂದು  ರಥಕ್ಕೆ ಕಳಸಾರೋಹಣ ಹಾಗೂ ಅಶ್ವಾರೋಹಣ ನೆರವೇರಲಿದೆ ಎಂದರು.

ಫೆ. 27ರಂದು  ದೊಡ್ಡಬಾತಿ ಶ್ರೀ ರೇವಣಸಿದ್ದೇಶ್ವರ ಸ್ವಾಮಿ ಮತ್ತು  ಬೀರಲಿಂಗೇಶ್ವರ ಸ್ವಾಮಿಯ ಆಗಮನವಾಗಲಿದೆ.  ತೇರುಮನೆ ಚೌಡೇಶ್ವರಿ ದೇವಸ್ಥಾನ ವತಿಯಿಂದ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ.

ಫೆ.28ರಂದು ಸಂಜೆ 6 ಗಂಟೆಗೆ ಶ್ರೀ ವೀರಭದ್ರೇಶ್ವರ ಸ್ವಾಮಿಯ ಮಹಾರಥೋತ್ಸವ ನೆರವೇರಲಿದೆ. ಫೆ. 29 ಸ್ವಾಮಿಯ ಗುಗ್ಗುಳ ಸೇವೆ, ಓಕುಳಿ ಸೇವೆ ಹಾಗೂ ಗಂಗಾಪೂಜೆ ನೆರವೇರಲಿದೆ. ನಂತರ ವೀರಗಾಸೆ ಸೇವೆ ನಡೆಯಲಿದ್ದು,  ಮಾರ್ಚ್ 1ರಂದು ಗುಗ್ಗಳದೊಂದಿಗೆ ಸ್ವಾಮಿ ದೇವಸ್ಥಾನಕ್ಕೆ ಆಗಮಿಸಲಿದೆ. ಮಾ.2ರಂದು ಕಂಕಣ ವಿಸರ್ಜನೆ ಕಾರ್ಯಕ್ರಮವಿದೆ ನಡೆಯಲಿದೆ..

ದೇವಸ್ಥಾನ ಸೇವಾ ಸಮಿತಿಯ ಪ್ರಮುಖರು ಹಾಗೂ ಗ್ರಾಮಸ್ಥ ರಾದ ವಿ. ವೀರಯ್ಯ, ಡಿ. ವೀರಯ್ಯ, ರಾಜಶೇಖರಪ್ಪ, ಡಿ. ಶಿವ ಪುತ್ರಪ್ಪ, ಜಿ.ಟಿ. ವೀರೇಶ್, ಟಿ. ವೀರಭದ್ರಪ್ಪ, ಸಿದ್ದೇಶ್ ಕೋಡಿಹಳ್ಳಿ, ಮಟ್ಟಿಕಲ್ಲು ವೀರಭದ್ರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿದ್ದರು.

error: Content is protected !!