ಫೆ.22 ರಿಂದ ಲೋಕಿಕೆರೆಯಲ್ಲಿ ತ್ರಿಕೂಟಾಚಲ ಮಂದಿರ ಉದ್ಘಾಟನೆ

ದಾವಣಗೆರೆ, ಫೆ.18- ತ್ರಿಕೂಟಾಚಲ ಸೇವಾ ಟ್ರಸ್ಟ್ ವತಿಯಿಂದ ತಾಲ್ಲೂಕಿನ ಲೋಕಿಕೆರೆ ಬಳಿಯ ವಿಜಯಪುರದಲ್ಲಿ ತ್ರಿಕೂಟಾಚಲ ಮಂದಿರದ ಉದ್ಘಾಟನೆ ಹಾಗೂ ದೇವರುಗಳ ಪ್ರತಿಷ್ಠಾಪನಾ ಕಾರ್ಯವು ಇದೇ ದಿನಾಂಕ 22ರಿಂದ ಮಾರ್ಚ್ 1ರವರೆಗೆ ನಡೆಯಲಿದೆ ಎಂದು ಟ್ರಸ್ಟ್‌ ಸಂಸ್ಥಾಪಕ ಸೊಪ್ಪಿನ ತಿಪ್ಪಣ್ಣ ತಿಳಿಸಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರ, ಸುಮಾರು ಒಂದೂವರೆ ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಈ ನೂತನ ದೇವಾಲಯದಲ್ಲಿ ತ್ರಿಕೂಟಾಚಲ ಮಂದಿರ, ಶ್ರೀ ಉಮಾ ಮಹೇಶ್ವರ ಸ್ವಾಮಿ, ಶ್ರೀ ವಿಜಯದುರ್ಗಾಪರಮೇಶ್ವರಿ, ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿ, ಶ್ರೀ ಮಹಾಗಣಪತಿ, ಶ್ರೀ ಆಂಜನೇಯ, ಶ್ರೀ ಸುಬ್ರಮಣ್ಯ ದೇವರುಗಳ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ.

9 ದಿನಗಳ ಕಾಲ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ನೇತೃತ್ವವನ್ನು ವೇದಮೂರ್ತಿ ರಾಜೇಶ ಭಟ್ಟರು ಹಾಗೂ ವಿಜಯ ಶ್ರೀಯಾಗ ಶಾಲಾ ಪುರೋಹಿತ ಶ್ರೀ ಸುಬ್ರಮಣ್ಯ ಸ್ವಾಮಿ ಅವರ ನೇತೃತ್ವದಲ್ಲಿ ಶಿವಪ್ರಸಾದ್ ಆನೇಕಲ್ಲು ಅವರ ಉಸ್ತುವಾರಿಯಲ್ಲಿ ನಡೆಯಲಿದೆ ಎಂದು ಹೇಳಿದರು.

ಮಾಹಿತಿಗಾಗಿ ಸೋಮಶೇಖರ್ (8310372678), ರವಿ ಎಸ್. (9900302061)ಗೆ ಸಂಪರ್ಕಿಸಬಹುದದಾಗಿದೆ. ಮಾರ್ಚ್ 1ರ ನಂತರ 48 ದಿನ ನಿರಂತರ ಮಂಡಲ ಪೂಜೆ ನಡೆಯಲಿದೆ ಎಂದವರು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಓಂಕಾರಪ್ಪ, ಶಿವಮೂರ್ತಿ, ಜೀನದತ್ತ ಉಪಸ್ಥಿತರಿದ್ದರು.

error: Content is protected !!