ಸನ್ನದುದಾರರ ಬೇಡಿಕೆಗಳ ಈಡೇರಿಕೆಗೆ ಒತ್ತಾಯ

ದಾವಣಗೆರೆ, ಫೆ. 18 – ರಾಜ್ಯದ ಎಲ್ಲಾ ವರ್ಗದ ಸನ್ನದುದಾರರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರ ಹಿಸಿ ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್‌ ಅಸೋಸಿ ಯೇಷನ್ ಪ್ರಧಾನ ಕಾರ್ಯದರ್ಶಿ ಬಿ. ಗೋವಿಂದ ರಾಜ್ ಹೆಗ್ಡೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 12,500 ಪರವಾನಿಗೆ ನೀಡಲಾಗಿದ್ದು, ಈ ಎಲ್ಲಾ ಸನ್ನದುದಾರರ ಪರವಾಗಿ ಅಸೋಸಿಯೇಷನ್ ಧ್ವನಿ ಎತ್ತುತ್ತಾ ಬಂದಿದೆ ಎಂದರು.

ಚಿಲ್ಲರೆ ಮದ್ಯ ಮಾರಾಟದ ಮೇಲೆ ಕನಿಷ್ಠ ಶೇ. 20 ಲಾಭಾಂಶ ನೀಡುವಂತೆ ಮನವಿ ಮಾಡಲಾಗಿದೆ. ಹೆಚ್ಚಳ ಮಾಡಿರುವ ಅಬಕಾರಿ ಶುಲ್ಕವನ್ನು
ಕಡಿಮೆ ಮಾಡಬೇಕೆಂಬಿತರೆ ಬೇಡಿಕೆಗಳನ್ನು ಈಡೇರಿಸಲು ಮನವಿಯಲ್ಲಿ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈ ಸಂಬಂಧ ಮೇಜರ್ ಸರ್ಜರಿಯ ಅಗತ್ಯವಿದ್ದು, ಬೇಡಿಕೆಗಳ ಈಡೇರಿಕೆೆಗೆ ಒತ್ತಾಯಿಸಿ ಫೆ. 22 ರಂದು ಗುರುವಾರ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 10.30 ಕ್ಕೆ ರೈಲ್ವೆ ನಿಲ್ದಾಣದಿಂದ ಮೆರವಣಿಗೆ ಆರಂಭವಾಗಿ, ಫ್ರೀಡಂ ಪಾರ್ಕ್‌ವರೆಗೆ  ನಡೆಯಲಿದೆ. ನಂತರ ಪ್ರತಿಭಟನೆ ನಡೆಯಲಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಅಸೋಸಿಯೇಷನ್ ಪದಾಧಿಕಾರಿಗಳಾದ ಎಸ್. ಗುರುಸ್ವಾಮಿ, ಟಿ.ಎಂ. ಮೆಹರ್ವಾಡಿ, ರಾಮುಲು ಬಳ್ಳಾರಿ, ಅಶೋಕ್ ಗುತ್ತೇದಾರ್, ಬಾಬುರೆಡ್ಡಿ, ರಾಜೇಂದ್ರ ಭೂತೆ, ರಾಮಲು ರೆಡ್ಡಿ, ತಿಮ್ಮಪ್ಪ, ವೆಂಕಟೇಶ್, ಈಶ್ವರ್‌ ಸಿಂಗ್ ದಾವಣಗೆರೆ ಉಪಸ್ಥಿತರಿದ್ದರು.  

error: Content is protected !!