ನಗರದಲ್ಲಿ ಇಂದು ಕಬಡ್ಡಿ ಕ್ರೀಡಾಪಟುಗಳ ಆಯ್ಕೆ

ದಾವಣಗೆರೆ ಜಿಲ್ಲೆಯ ಬಾಲಕ ಮತ್ತು ಬಾಲಕಿಯರ ಹಾಗೂ ಪುರುಷರ ಸೀನಿಯರ್ ಕಬಡ್ಡಿ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ಇಂದು ಮಧ್ಯಾಹ್ನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. 

ಸೀನಿಯರ್ ಪುರುಷರ ಕಬಡ್ಡಿ ಕ್ರೀಡಾಪಟುಗಳ ತೂಕ 85 ಕೆಜಿ ಒಳಗೆ ಇರಬೇಕು. ಸಬ್ ಜ್ಯೂನಿಯರ್ ಬಾಲಕ ಮತ್ತು ಬಾಲಕಿಯರ ತೂಕ 55 ಕೆಜಿ ಒಳಗಿರಬೇಕು. 16 ವರ್ಷದೊಳಗಿನವರಾಗಿರಬೇಕು. ಕಡ್ಡಾಯವಾಗಿ ಆಧಾರ್ ಕಾರ್ಡ್ ತರಬೇಕು. ಹೆಚ್ಚಿನ ಮಾಹಿತಿಗಾಗಿ ದಾವಣಗೆರೆ ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆಯ ಅಧ್ಯಕ್ಷರು ಅಥವಾ ಸಹ ಕಾರ್ಯದರ್ಶಿಯನ್ನು (6363118501, 8073185068) ಸಂಪರ್ಕಿಸಬಹುದು. ಬಿಹಾರದಲ್ಲಿ ನಡೆಯುವ 33 ನೇ ರಾಷ್ಟ್ರೀಯ ಸಬ್ ಜ್ಯೂನಿಯರ್ ಕಬಡ್ಡಿ ಚಾಂಪಿಯನ್‌ಶಿಪ್ ಗೆ ಹಾಗೂ 70 ನೇ ಸೀನಿಯರ್ ರಾಷ್ಟ್ರೀಯ ಪುರುಷರ ಕಬಡ್ಡಿ ಚಾಂಪಿಯನ್ ಶಿಪ್‌ಗೆ ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ವತಿಯಿಂದ ರಾಜ್ಯ ಕಬಡ್ಡಿ ತಂಡದ ಆಯ್ಕೆಯು ನಾಡಿದ್ದು ದಿನಾಂಕ 20 ರಂದು ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ. 

error: Content is protected !!