ಮಲೇಬೆನ್ನೂರು ಸಮೀಪದ ಎರೇಬೂದಿಹಾಳ್ ಗ್ರಾಮದ ಶ್ರೀ ರೇಣುಕಾ ಎಲ್ಲಮ್ಮದೇವಿ ಹಾಗೂ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವವು ಇಂದು ಜರುಗಲಿದೆ ಎಂದು ದೇವಸ್ಥಾನ ಟ್ರಸ್ಟ್ ಕಮಿಟಿಯ ಟಿ.ನಾಗರಾಜ್, ಟಿ.ನೀಲಕಂಠಪ್ಪ, ಟಿ.ಮಲ್ಲೇಶಪ್ಪ, ಟಿ.ಮುಕುಂದ ತಿಳಿಸಿದ್ದಾರೆ. ಇಂದು ಬೆಳಿಗ್ಗೆ 4 ರಿಂದ 6 ರವರೆಗೆ ಗಂಗಾ ಪೂಜೆ, 6 ರಿಂದ 8 ರವರೆಗೆ ರುದ್ರಾಭಿಷೇಕ, 8 ರಿಂದ 9 ರವರೆಗೆ ಮಹಾಮಂಗಳಾರತಿ, ಮಧ್ಯಾಹ್ನ 12 ರಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.
ಬೂದಿಹಾಳ್: ಇಂದು ಯಲ್ಲಮ್ಮ ದೇವಿ ಜಾತ್ರೆ
