ದಾವಣಗೆರೆ, ಫೆ. 15 – ಕಕ್ಕರಗೊಳ್ಳ ಗ್ರಾಮದ ಪಟೇಲ್ ವೀರಪ್ಪ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ `ಪ್ರೇರಣ’ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ನಾಡಿದ್ದು ದಿನಾಂಕ 17ರ ಶನಿವಾರ ಸಂಜೆ 5 ಗಂಟೆಗೆ ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಅಂದು ಮಧಾಹ್ನ 3 ಗಂಟೆಗೆ ಹರಿಹರದ ಆಕಾರ್-ಆಧಾರ್ ಸಂಸ್ಥೆಯ ವತಿಯಿಂದ ಒಂದು ರೂಪಾಯಿ ನಾಣ್ಯದಲ್ಲಿ ರಚಿಸಲ್ಪಟ್ಟಿರುವ ಅಯೋಧ್ಯಾ `ಶ್ರೀ ರಾಮ ಮಂದಿರದ ಕಲಾಕೃತಿ’ ಪ್ರದರ್ಶನ ಹಾಗೂ ನಮ್ಮ ಶಾಲಾ ಮಕ್ಕಳಿಂದ ರಚಿತವಾಗಿರುವ ವಿವಿಧ ಸೃಜನಶೀಲ ಕಲೆಗಳ ಪ್ರದರ್ಶನವನ್ನು ಶಾಲಾ ಆವರಣದಲ್ಲಿ ಏರ್ಪಡಿಸಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಟೇಲ್ ವೀರಪ್ಪ ಟ್ರಸ್ಟ್‌ನ ಅಧ್ಯಕ್ಷ ಕೆ.ಜಿ. ಬಸವನಗೌಡ್ರು ವಹಿಸುವರು. ತಹಶೀಲ್ದಾರ್ ಡಾ. ಅಶ್ವತ್ಥ್ ಎಂ.ಬಿ. ಮುಖ್ಯ ಅತಿಥಿಗಳಾಗಿರುವರು. ಕಾರ್ಯಾಧ್ಯಕ್ಷ ಕೆ.ಜಿ. ವೀರಬಸಪ್ಪ, ಮ್ಯಾನೇಜಿಂಗ್ ಟ್ರಸ್ಟಿ ಮತ್ತು ಕಾರ್ಯದರ್ಶಿ ವೀರೇಶ್ ಪಟೇಲ್ ಉಪಸ್ಥಿತರಿರುವರು ಎಂದು ಕಾರ್ಯದರ್ಶಿ ಗಿರಿರಾಜ್ ಕೆ.ಬಿ. ತಿಳಿಸಿದರು.