ಗೃಹ ಬಳಕೆಯ ಅತೀ ದೊಡ್ಡ ಪ್ರದರ್ಶನ ಗೃಹಶೋಭೆ ಇಂದಿನಿಂದ ಬರುವ ಮಾರ್ಚ್ 3 ರವರೆಗೆ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿದೆ.
100 ಕ್ಕೂ ಅಧಿಕ ಮಳಿಗೆಗಳು ಇದರೊಂದಿಗೆ ಫುಡ್‌ಕೋರ್ಟ್, ದೆಹಲಿಯ ಲೋಟೋಸ್ ಹೌಸ್ ಮಾದರಿ ಸೇರಿದಂತೆ ಬಗೆಬಗೆಯ ಕೇಕ್ ಶೋ, ಹಲವು ಗೇಮ್ಸ್, ಅಮ್ಯೂಸ್ ಮೆಂಟ್ ಪಾರ್ಕ್ ಪ್ರದರ್ಶನದ ಮುಖ್ಯ ಆಕರ್ಷಣೆಗಳಾಗಿವೆ. ಇದರೊಂದಿಗೆ ಪದಾರ್ಥಗಳನ್ನು ಜನರು ಕೈಗೆಟಕುವ ಬೆಲೆಯಲ್ಲಿ ಖರೀದಿಸಬಹುದಾಗಿದೆ.
ಇಂದು ಬೆಳಿಗ್ಗೆ 11 ಗಂಟೆಗೆ ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಡಾ. ಪ್ರಭಾ ಮಲ್ಲಿಕಾರ್ಜುನ್ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಯಾಗಿ ದಿನೇಶ್ ಕೆ. ಶೆಟ್ಟಿ ಭಾಗವಹಿಸಲಿದ್ದಾರೆ ಎಂದು ಗೃಹಶೋಭೆ ನಿರ್ದೇಶಕ ನಾಗಚಂದ್ರ ತಿಳಿಸಿದ್ದಾರೆ.