ಡಿ. ದೇವರಾಜ ಅರಸು ಬಡಾವಣೆಯಲ್ಲಿರುವ ಶ್ರೀ ಮಾತಾ ಅನ್ನಪೂರ್ಣೆಶ್ವರಿ ದೇವಸ್ಥಾನದ 26 ನೇ ವಾರ್ಷಿಕೋತ್ಸವ ಹಾಗೂ ರಥೋತ್ಸವ ಇಂದು ಜರುಗಲಿದೆ. ಇಂದು ಬೆಳಿಗ್ಗೆ 8 ಕ್ಕೆ ಪಂಚದ್ರವ್ಯ ಪಂಚಾಮೃತಾಭಿಷೇಕ ಮಾಡಲಾಗುವುದು. ಮಧ್ಯಾಹ್ನ 12.05 ಕ್ಕೆ ಶ್ರೀ ಮಾತಾ ಅನ್ನಪೂರ್ಣೇಶ್ವರಿ ರಥೋತ್ಸವ ಜರುಗಲಿದೆ.
ಸಂಜೆ 5 ಕ್ಕೆ ಶ್ರೀ ವಾಸವಿ ಯುವತಿಯರ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ವಿಶೇಷ ಆಹ್ವಾನಿತರಾಗಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಶಾಸಕ ಶಾಮನೂರು ಶಿವಶಂಕರಪ್ಪ, ಸಂಸದ ಜಿ.ಎಂ. ಸಿದ್ಧೇಶ್ವರ, ಮೇಯರ್ ವಿನಾಯಕ ಪೈಲ್ವಾನ್, ಪಾಲಿಕೆ ಸದಸ್ಯೆ ಆಶಾ ಉಮೇಶ್ ಭಾಗವಹಿಸಲಿದ್ದಾರೆ.