ದಾವಣಗೆರೆ ತಾಲ್ಲೂಕಿನ ಶ್ರೀ ಕ್ಷೇತ್ರ ಕಡಲಬಾಳು, ಶ್ರೀ ಹನುಮ ಭೀಮ ಮಧ್ವ ಸೇವಾ ಚಾರಿ ಟಬಲ್ ಟ್ರಸ್ಟ್ನಿಂದ ಇತಿಹಾಸ ಪ್ರಸಿದ್ಧ ಶ್ರೀಮಧ್ವನವಮಿ, ರಥೋತ್ಸವವನ್ನು ಇಂದಿನಿಂದ ನಾಲ್ಕು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳೊಂದಿಗೆ ಹಮ್ಮಿಕೊಳ್ಳಲಾಗಿದೆ.
ಇಂದು ರಥಸಪ್ತಮಿಯಯಲ್ಲಿ ಬೆಳಿಗ್ಗೆ 6.30 ರಿಂದ ಪಂಚಾಮೃತ ಅಭಿಷೇಕ, ನಾಂದಿ ಮತ್ತು ಅಂಕುರಾರ್ಪಣೆ, ಕಂಕಣ, ಬೆಳಿಗ್ಗೆ 8.30ಕ್ಕೆ ವಾಯುಸ್ತುತಿ ಪುನಶ್ಚರಣ ಹಾಗೂ ರಾಘವೇಂದ್ರ ಅಷ್ಟೋತ್ತರ, ಬೆಳಿಗ್ಗೆ 11 ರಿಂದ ಪುಷ್ಪಾಲಂಕಾರ, ಶ್ರೀ ಸ್ವಾಮಿಗೆ ಮತ್ತು ಭಾರತೀದೇವಿಗೆ ವಿವಾಹ, ಬಲಿಹರಣ ಹಾಗೂ ಮಧ್ಯಾಹ್ನ 12ಕ್ಕೆ ವೇ|| ಪಂ. ಮಣ್ಣೂರು ಗೋಪಾಲಚಾರ್ ಇವರಿಂದ ಪ್ರವಚನ ನಡೆಯಲಿದೆ.
ನಾಳೆ ಶನಿವಾರ ಭೀಷ್ಮಾಷ್ಠಮಿಯಂದು ಬೆಳಿಗ್ಗೆ 6.30 ರಿಂದ ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ, ಬೆಳಿಗ್ಗೆ 8.30ಕ್ಕೆ ವಾಯುಸ್ತುತಿ ಪುನಶ್ಚರಣ ಹಾಗೂ ರಾಘವೇಂದ್ರ ಅಷ್ಟೋತ್ತರ, ಬೆಳಿಗ್ಗೆ 9.30 ರಿಂದ `ಪವಮಾನ ಹೋಮ’ ನಂತರ ಬಲಿಹರಣ, ಬೆಳಿಗ್ಗೆ 11 ರಿಂದ ಶ್ರೀ ರಾಮ ಸಂಗೀತ ಸೇವಾ ಮಂಡಳಿ ಇವರಿಂದ ಭಜನೆ, ಪ್ರಾಣೇಶಾಚಾರ್ ಅವರಿಂದ ಪ್ರವಚನ ಕಾರ್ಯಕ್ರಮ, ಮಧ್ಯಾಹ್ನ 12.30 ರಿಂದ ಮಹಾಮಂಗಳಾರತಿ ನಂತರ ತೀರ್ಥಪ್ರಸಾದ ವಿನಿಯೋಗವಿದೆ.
ಈ ನಾಲ್ಕೂ ದಿನಗಳ ಕಾರ್ಯಕ್ರಮವನ್ನು ವೇ|| ಪಂ|| ಕಡೂರು ಪ್ರಾಣೇಶಾಚಾರ್ರವರು ವಹಿಸುವರು.