ನಂಜಪ್ಪ ಆಸ್ಪತ್ರೆಯ ತಜ್ಞ ವೈದ್ಯರ ತಂಡದಿಂದ ಯಶಸ್ವಿ ಶಸ್ತ್ರಚಿಕಿತ್ಸೆ

ದಾವಣಗೆೇೆರೆ, ಫೆ. 14- ನಗರದ ನಂಜಪ್ಪ ಆಸ್ಪತ್ರೆಯ ಕ್ಯಾನ್ಸರ್ ಚಿಕಿತ್ಸಾ (ಅಂಕಾಲಜಿ) ವಿಭಾಗವು ಅಂಡಾಶಯದ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 51 ವರ್ಷದ ಮಹಿಳೆಗೆ ಕ್ಯಾನ್ಸರ್ ಶಸ್ತ್ರ ಚಿಕಿತ್ಸೆಯ ಜೊತೆಗೆ, ಸಿಆರ್‌ಎಸ್ (ಸೈಟೋರೆಡಕ್ಟಿವ್ ಶಸ್ತ್ರ ಚಿಕಿತ್ಸೆ) ಮತ್ತು ಹೈಪೆಕ್ ಎಂಬ ಸಂಕೀರ್ಣ ಶಸ್ತ್ರ ಚಿಕಿತ್ಸೆಯನ್ನು ಯಶಸ್ಸಿಯಾಗಿ ಮಾಡಲಾಗಿದೆ ಎಂದು ಮುಂಬೈನ ಟಾಟಾ ಮೆಮೋರಿಯಲ್ ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ತಜ್ಞ ಡಾ. ಎನ್. ನಿಶ್ಚಲ್ ಅವರು ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಸುಮಾರು 10 ಗಂಟೆಗಳ ಕಾಲ ನಡೆಸಲಾಗಿದೆ. ಪ್ರಸ್ತುತ ರೋಗಿಯ ಆರೋಗ್ಯ ಸ್ಥಿರವಾಗಿದ್ದು, ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆಂದು ಮಾಹಿತಿ ನೀಡಿದರು.

ಹೈಪರ್ಥೆಮಿಕ್ಮಿರಕ್ ಇಂಟ್ರಾಪೆರಿಟೋನಿಯಲ್ ಕೀಮೋಥೆರಫಿಯು ಅನೇಕ ಅಕ್ರಮಣಕಾರಿ ಕಿಬ್ಬೊಟ್ಟೆಯು ಕ್ಯಾನ್ಸರ್‌ಗಳಿಗೆ, ಅಪೆಂಡಿಕ್ಯುಲರ್ ಕ್ಯಾನ್ಸರ್‌ನಂತಹ ಗೆಡ್ಡೆಗಳಿಗೆ ತುಲನಾತ್ಮಕವಾಗಿ ಹೊಸ ಚಿಕಿತ್ಸೆಯ ಆಯ್ಕೆಯಾಗಿದೆ. ಕಿಬ್ಬೊಟ್ಟೆಯ ಕುಳಿಯೊಳಗೆ ಹರಡಿರುವ ಕೊಲೊರೆಕ್ಟಲ್ ಕ್ಯಾನ್ಸರ್, ಅಂಡಾಶಯದ ಕ್ಯಾನ್ಸರ್, ಹೊಟ್ಟೆಯ ಕ್ಯಾನ್ಸರ್ ಮತ್ತು ಮಸೋಥೆಲಿಯೋಮಾ ದೇಹದ ಬಹುತೇಕ ಆಂತರಿಕ ಅಂಗಾಂಗಗಳಲ್ಲಿ ವ್ಯಾಪಿಸಿರುವ ತೆಳುವಾದ ಅಂಗಾಂಶ ಪದರದಲ್ಲಿ ಕಂಡುಬರುವ ಒಂದು ಬಗೆಯ ಕ್ಯಾನ್ಸರ್ ಅನ್ನು ಈ ಚಿಕಿತ್ಸೆಯಿಂದ ನಿಯಂತ್ರಿಸಬಹುದು ಮತ್ತು ಕೆಲವೊಮ್ಮೆ ಗುಣಪಡಿಸಬಹುದು ಎಂದು ಹೇಳಿದರು.

ನಂಜಪ್ಪ ಆಸ್ಪತ್ರೆಯಲ್ಲಿ ನಮ್ಮ ತಂಡವು ಕ್ಯಾನ್ಸರ್ ಶಸ್ತ್ರಚಿಕಿತ್ಸಕರು (ಸರ್ಜಿಕಲ್ ಅಂಕಾಲಜಿಸ್ಟ್), ವೈದ್ಯ ಕೀಯ ಕ್ಯಾನ್ಸರ್ ತಜ್ಞರು (ಮೆಡಿಕಲ್ ಅಂಕಾಲಜಿಸ್ಟ್), ವಿಕಿರಣ ಕ್ಯಾನ್ಸರ್ ತಜ್ಞರು (ರೇಡಿಯೇಷನ್ ಅಂಕಾಲ ಜಿಸ್ಟ್) ಮತ್ತು ಕ್ಯಾನ್ಸರ್ ರೋಗಶಾಸ್ತ್ರಜ್ಞರು (ಅಂಕೋ ಪ್ಯಾಥಾಲಜಿಸ್ಟ್) ಒಳಗೊಂಡ ಸಮಗ್ರ ಟ್ಯೂಮರ್ ಬೋರ್ಡ್ ಕಾರ್ಯ ವಿಧಾನದ ಮೂಲಕ ಪ್ರತಿಯೊಬ್ಬ ರೋಗಿಗೆ ಸಾಧ್ಯವಾದಷ್ಟು ಅತ್ಯುತ್ತಮ ಚಿಕಿತ್ಸೆ ದೊರೆಯು ವಂತೆ ಖಾತರಿ ವಹಿಸಲು ಶ್ರಮಿಸುತ್ತಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮೆಡಿಕಲ್ ಅಂಕಾಲಜಿಸ್ಟ್ ಡಾ. ಪ್ರಸಾದ್ ಪಿ. ಗುಣಾರಿ, ಅರಿವಳಿಕೆ ತಜ್ಞರಾದ ಡಾ. ವಿಜಯ ಚಂದ್ರಪ್ಪ, ಪ್ರಶಾಂತ್ ತ್ರಿವೇಣಿ, ಡಾ. ಮನುದೀಪ್‌, ಡಾ. ಚಾರ್ವಿ ಉಪಸ್ಥಿತರಿದ್ದರು.

error: Content is protected !!