ಮಲೇಬೆನ್ನೂರು : ಇ-ಆಸ್ತಿ ಆಂದೋಲನ

ಮಲೇಬೆನ್ನೂರು, ಫೆ. 14- ಇಲ್ಲಿನ ಪುರಸಭೆ ವ್ಯಾಪ್ತಿಯಲ್ಲಿ ಇಂದಿನಿಂದ ಬರುವ ಮಾರ್ಚ್ 3ರವರೆಗೆ ಇ-ಆಸ್ತಿ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪುರಸಭೆ ಮುಖ್ಯಾಧಇಕಾರಿ ಎ. ಸುರೇಶ್ ತಿಳಿಸಿದ್ದಾರೆ.

ಇ-ಆಸ್ತಿ ಖಾತಾ ಆಂದೋಲನಕ್ಕೆ ಪಟ್ಟಣದ ನಜರು ಅರ್ಜಿ, ಅರ್ಜಿದಾರನ ಫೋಟೋ ಮತ್ತು ಮನೆ ಫೋಟೋ, ಚುನಾವಣಾ ಗುರುತಿನ ಚೀಟಿ ಅಥವಾ ಪಾನ್ ಕಾರ್ಡ್, ಆಸ್ತಿಗೆ ಸಂಬಂಧಿಸಿದ ದಾಖಲೆಗಳು, 15 ವರ್ಷಗಳ ಇಸಿ, 2023-24ರವರೆಗೆ ಪಾವತಿಸಿದ ಆಸ್ತಿ ತೆರಿಗೆ ಮತ್ತು ನೀರಿನ ಶುಲ್ಕದ ಚನಲ್ ಪ್ರತಿ, ಭೂ ಪರಿವರ್ತನೆ ಆದೇಶ ಹಾಗೂ ಅನುಮೋದಿತ ಬಡಾವಣೆ ನಕ್ಷೆ, ದಾಖಲೆಗಳನ್ನು ಸಲ್ಲಿಸಬೇಕು.

ಆಸ್ತಿ ವಿವರಗಳನ್ನು `ಆಸ್ತಿ ಕಣಜ’ ಆನ್‌ಲೈನ್ ತಂತ್ರಾಂಶದಲ್ಲಿ ನಮೂದಿಸಲು ಅಗತ್ಯ ದಾಖಲೆಗಳನ್ನು ಸಲ್ಲಿಸಬಹುದೆಂದು ಸುರೇಶ್  ತಿಳಿಸಿದ್ದಾರೆ.

error: Content is protected !!