ಚನ್ನಗಿರಿ : ಸಂವಿಧಾನ ಜಾಗೃತಿ ಜಾಥಾ ಇಂದು

ಸಂವಿಧಾನದ ಆಶಯವನ್ನು ಜನಸಾಮಾನ್ಯರಿಗೆ ತಿಳಿಸಿಕೊಡಲು ಸಂವಿಧಾನ  ಜಾಗೃತಿ ಜಾಥಾ ಜಿಲ್ಲೆ ಯಾದ್ಯಂತ ನಡೆಯುತ್ತಿದ್ದು, ಇಂದಿ ನಿಂದ ಇದೇ ದಿನಾಂಕ 17 ರವರೆಗೆ ಚನ್ನಗಿರಿ ಮತ್ತು ದಾವಣಗೆರೆ ತಾಲ್ಲೂ ಕಿನ ವಿವಿಧ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಳಗಳಲ್ಲಿ ಸಂಚರಿಸಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ ತಿಳಿಸಿ ದ್ದಾರೆ. ಜಾಥಾವು  ಇಂದು ಚನ್ನಗಿರಿ ತಾಲ್ಲೂಕಿನ ದುರ್ವಿಗೆರೆ, ಮಲ ಹಾಳು, ಗೋಪನಾಳು, ಕಂಚಿಗನಾಳ್, ವಡ್ನಾಳ್, ಹೊದಿಗೆರೆ, ಹೆಬ್ಬಳ ಗೆರೆ, ಕೊರಟಗೆರೆ,  ಗ್ರಾಮಗಳಲ್ಲಿ ಸಂಚರಿಸಲಿದೆ. ನಾಳೆ ಗುರುವಾರ ಚನ್ನಗಿರಿ ತಾಲ್ಲೂಕಿನ ಕೊರ ಟಗೆರೆ, ಚಿಕ್ಕಗಂಗೂರು, ನುಗ್ಗೇಹಳ್ಳಿ, ದೇವರ ಹಳ್ಳಿ, ಕಾಕನೂರು, ಕೊಂಡದ ಹಳ್ಳಿ, ಮಲ್ಲಾಪುರ, ಸೋಮ್ಲಾಪುರ  ಗ್ರಾಮಗಳಲ್ಲಿ ಸಂಚರಿಸಲಿದೆ. ದಿನಾಂಕ 16 ರಂದು ಮಲ್ಲಾಪುರ, ಕೋಗ ಲೂರು, ಬೆಳ್ಳಿಗನೂಡು, ಸಂತೇಬೆನ್ನೂರು, ದೊಡ್ಡಬ್ಬಿಗೆರೆ, ಸಿದ್ದನಮಠ, ಮೆದಿಕೆರೆ, ತಣಿಗೆರೆ, ಗ್ರಾಮಗಳಲ್ಲಿ ಸಂಚರಿಸಲಿದೆ.

 ದಿನಾಂಕ 17 ರಂದು ತಣಿಗೆರೆ, ಕಂದಗಲ್ಲು, ಮಳಲಕೆರೆ, ಬಾಡಾ, ಅಣಬೇರು,  ಹುಚ್ಚವ್ವನಹಳ್ಳಿ, ಮಾಯ ಕೊಂಡ ಗ್ರಾಮದಿಂದ ಮುಂದಿನ ಗ್ರಾಮಗಳಿಗೆ ಸಂಚರಿಸಲಿದೆ.  

error: Content is protected !!