ನಗರದಲ್ಲಿ ಇಂದು ಶ್ರೀ ಗುರು ಬಾಲ ಶನೇಶ್ವರಸ್ವಾಮಿ ದೇಗುಲದ ವಾರ್ಷಿಕೋತ್ಸವ

ಎತ್ತಿನ ಸಂತೆ ಹಿಂಭಾಗದ ಮಹಾಲಕ್ಷ್ಮೀ ಬಡಾವಣೆ ತಲ್ಲಿನ ಶ್ರೀ ಗುರು ಬಾಲ ಶನೇಶ್ವರಸ್ವಾಮಿ ಮಹಾಕ್ಷೇತ್ರದ ಎರಡನೇ ವಾರ್ಷಿಕೋತ್ಸವದ ಅಂಗವಾಗಿ ಇಂದು ವಿವಿಧ ಧಾರ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಇಂದು ಬೆಳಿಗ್ಗೆ 5 ಗಂಟೆಗೆ ಅಭಿಷೇಕ, ಮಧ್ಯಾಹ್ನ 12.30 ಕ್ಕೆ ಧಾರ್ಮಿಕ ಸಮಾರಂಭ ಏರ್ಪಡಿಸಲಾಗಿದೆ. ಸಂಜೆ 5.30 ಕ್ಕೆ ಶ್ರೀ ಗುರು ಬಾಲ ಶನೇಶ್ವರ ಸ್ವಾಮಿಯ ಉತ್ಸವವು ಜರುಗಲಿದೆ. ಮಧ್ಯಾಹ್ನ 1 ಗಂಟೆಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ.

error: Content is protected !!