ಎತ್ತಿನ ಸಂತೆ ಹಿಂಭಾಗದ ಮಹಾಲಕ್ಷ್ಮೀ ಬಡಾವಣೆ ತಲ್ಲಿನ ಶ್ರೀ ಗುರು ಬಾಲ ಶನೇಶ್ವರಸ್ವಾಮಿ ಮಹಾಕ್ಷೇತ್ರದ ಎರಡನೇ ವಾರ್ಷಿಕೋತ್ಸವದ ಅಂಗವಾಗಿ ಇಂದು ಮತ್ತು ನಾಳೆ ವಿವಿಧ ಧಾರ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಇಂದು ಬೆಳಿಗ್ಗೆ 6.30 ಕ್ಕೆ ಕೆಂಡದಾರ್ಚನೆ, 7.30 ಕ್ಕೆ ಶ್ರೀ ವೀರಭದ್ರೇಶ್ವರ ಸ್ವಾಮಿ ಗುಗ್ಗಳ ಕಾರ್ಯಕ್ರಮ ಮೆರವಣಿಗೆಯೊಂದಿಗೆ ಜರುಗಲಿದೆ.
ನಾಳೆ ಬುಧವಾರ ಬೆಳಿಗ್ಗೆ 5 ಗಂಟೆಗೆ ಅಭಿಷೇಕ, ಮಧ್ಯಾಹ್ನ 12.30 ಕ್ಕೆ ಧಾರ್ಮಿಕ ಸಮಾರಂಭ ಏರ್ಪಡಿಸಲಾಗಿದೆ. ಸಂಜೆ 5.30 ಕ್ಕೆ ಶ್ರೀ ಗುರು ಬಾಲ ಶನೇಶ್ವರ ಸ್ವಾಮಿಯ ಉತ್ಸವವು ಜರುಗಲಿದೆ. ಮಧ್ಯಾಹ್ನ 1 ಗಂಟೆಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ.