ನಗರದಲ್ಲಿ ಇಂದು ಸಂಸದರ ಕಚೇರಿ ಎದುರು ಸಿಪಿಐ ಪ್ರತಿಭಟನೆ

ಸಂಸದರ ಕಚೇರಿ ಎದುರು ಸಿಪಿಐ ಜಿಲ್ಲಾ ಮಂಡಳಿ ವತಿಯಿಂದ ಇಂದು ಪ್ರತಿಭಟನೆ ನಡೆಸಲಾಗುವುದು ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ತಿಳಿಸಿದ್ದಾರೆ. 

ಬೆಳಿಗ್ಗೆ 11.30ಕ್ಕೆ ಸಂಸದರ ಕಚೇರಿ ಬಳಿ ಸಿಪಿಐ ಕಾರ್ಯಕರ್ತರು ಸೇರಿ, ಕರ್ನಾಟಕದ ಜನರ ತೆರಿಗೆ ಹಣದಲ್ಲಿ ರಾಜ್ಯಕ್ಕೆ ಕೊಡಬೇಕಾದ ತೆರಿಗೆ ಹಣದಲ್ಲಿ ತಾರತಮ್ಯ ಎಸೆಗುತ್ತಿರುವ ಕೇಂದ್ರ ಸರ್ಕಾರದ ನಡೆ ಯನ್ನು ವಿರೋಧಿಸಿ ಮತ್ತು ರಾಜ್ಯದ ತೆರಿಗೆ ಹಣದ ಪಾಲನ್ನು ನ್ಯಾಯ ಸಮ್ಮತವಾಗಿ ರಾಜ್ಯಕ್ಕೆ ಕೊಡಬೇಕೆಂದು ಅವರು ಒತ್ತಾಯಿಸಿದ್ದಾರೆ.

error: Content is protected !!