ದಾವಣಗೆರೆ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ಆನ್‌ಲೈನ್‌ನಲ್ಲಿ ಶರಣ ಚಿಂತನ ಗೋಷ್ಠಿ- ಸಂಚಿಕೆ 1 ಕಾರ್ಯ ಕ್ರಮವನ್ನು ಇಂದು ಸಂಜೆ 7 ರಿಂದ 8.30ರವರೆಗೆ ಏರ್ಪಡಿಸಲಾಗಿದೆ.
https://meet.google.com/ryi-mxfg-bmi ಲಿಂಕ್ ಉಪಯೋಗಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದಾಗಿದೆ.
ಡಾ. ಎಂ.ಜಿ. ಈಶ್ವರಪ್ಪ ಆಶಯ ನುಡಿಗಳನ್ನಾಡಲಿದ್ದಾರೆ. ಕೆ.ಬಿ. ಪರಮೇಶ್ವರಪ್ಪ ಅಧ್ಯಕ್ಷರ ನುಡಿಗಳನ್ನಾಡಲಿದ್ದಾರೆ. ಅಕ್ಕನ ವಚನಗಳಲ್ಲಿ ಕದಳಿಯ ಪರಿಕಲ್ಪನೆ ವಿಷಯ ಕುರಿತು ಡಾ. ಉಷಾದೇವಿ ಹಿರೇಮಠ ಅನುಭಾವದ ನುಡಿಗಳ ನ್ನಾಡಲಿದ್ದಾರೆ. ಅತಿಥಿಗಳಾಗಿ ಗಾಯತ್ರಿ ವಸ್ತ್ರದ್ ಉಪಸ್ಥಿತರಿರುವರು.