ಕೊಟ್ಟೂರು, ಫೆ. 9- ಬಳ್ಳಾರಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ನಡೆಸಿದ 2022-23ನೇ ಸಾಲಿನ ಬಿಎಸ್ಸಿ ಪದವಿ ಪರೀಕ್ಷೆಯಲ್ಲಿ ಕೊಟ್ಟೂರೇಶ್ವರ ಮಹಾವಿದ್ಯಾಲಯಕ್ಕೆ 3 ರ್ಯಾಂಕ್ ಗಳು ಲಭಿಸಿವೆ. ದೀಪಾ ಕೆ. (93.94) 2ನೇ ರ್ಯಾಂಕ್ , ಎನ್.ಎಸ್. ಸಾಧನಾ (93.60) 3ನೇ ರ್ಯಾಂಕ್ ಹಾಗೂ ಕ್ಷಮಾ ಪಿ (92.62) 5ನೇ ರಾಂಕ್ ಪಡೆದಿದ್ದಾರೆ ಎಂದು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಸಿದ್ಧರಾಮ ಕಲ್ಮಠ ತಿಳಿಸಿದ್ದಾರೆ.
January 10, 2025