ಕುಂದುವಾಡ ರಸ್ತೆಯ ಶ್ರೀ ಗಡಿ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ವತಿಯಿಂದ ಶ್ರೀ ಬನ್ನಿಮಹಾಂಕಾಳಿ, ಶ್ರೀ ವಿನಾಯಕ, ಶ್ರೀ ಈಶ್ವರ, ಶ್ರೀ ಬಸವೇಶ್ವರ ಹಾಗೂ ಶ್ರೀ ಗಡಿಚೌಡೇಶ್ವರಿ ದೇವಿಯ 19 ನೇ ವಾರ್ಷಿಕೋತ್ಸವ ಹಾಗೂ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ 15 ನೇ ವಾರ್ಷಿಕೋತ್ಸವ ಕಾರ್ಯಕ್ರಮಗಳು ಇಂದಿನಿಂದ ಮೂರು ದಿನಗಳ ಕಾಲ ಜರುಗಲಿವೆ.
ಇಂದು ಬೆಳಿಗ್ಗೆ 6.30 ಕ್ಕೆ ಪಂಚಾಮೃತ ಅಭಿಷೇಕದೊಂದಿಗೆ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, ನಾಳೆ ಭಾನುವಾರ ಬೆಳಿಗ್ಗೆ 6.30 ಕ್ಕೆ ಪಂಚಾಮೃತ ಅಭಿಷೇಕ, ದಿನಾಂಕ 12 ರಂದು ಸೋಮವಾರ ಬೆಳಿಗ್ಗೆ 5.30 ಕ್ಕೆ ಕಾಕಡಾರತಿ ನಂತರ 8.30 ಕ್ಕೆ ಪ್ರಸಾದ ವಿನಿಯೋಗವಿದೆ.