ದಾವಣಗೆರೆ, ಫೆ.7- ನಗರದ ದೇವರಾಜ ಅರಸು ಬಡಾವಣೆ ‘ಎ’ ಬ್ಲಾಕ್ ನಲ್ಲಿರುವ ಶ್ರೀ ಮಾತಾ ಅನ್ನಪೂ ರ್ಣೇಶ್ವರಿ ದೇವಸ್ಥಾನದಲ್ಲಿ ಅವರಾತ್ರಿ ಅಮವಾಸ್ಯೆ ಪ್ರಯುಕ್ತ ನಾಡಿದ್ದು ದಿನಾಂಕ 9ರ ಶುಕ್ರವಾರ ಶ್ರೀ ನಾಗಲಿಂಗೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಮೃತ್ಯುಂಜಯ ಹೋಮ, ಪ್ರಧಾನ ದೇವತೆ ಶ್ರೀ ಮಾತಾ ಅನ್ನಪೂರ್ಣೇ ಶ್ವರಿಗೆ ಮಹಾ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ದೇವ ಸ್ಥಾನ ಸಮಿತಿ ಗೌರವ ಅಧ್ಯಕ್ಷ ಆರ್.ಜಿ. ನಾಗೇಂದ್ರ ಪ್ರಕಾಶ್ ತಿಳಿಸಿದ್ದಾರೆ. ಶ್ರೀಮತಿ ಸುಮನ್, ವಾಗೀಶ್ ಕಟ್ಟಿಗಿಹಳ್ಳಿಮಠ್ ವಕೀಲರು, ಕುಟುಂಬದವರು ಸೇವಾಕರ್ತ ರಾಗಿದ್ದಾರೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಪ್ರಕಾಶ್ ಪಾಟೀಲ್ ವಿವರಿಸಿದ್ದಾರೆ.
ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಅಮವಾಸ್ಯೆ
