ದಾವಣಗೆರೆ, ಫೆ.7- ನಗರದ ದೊಡ್ಡಪೇಟೆಯ ಶ್ರೀ ಬಸವೇಶ್ವರ ಮತ್ತು ಶ್ರೀ ದಾನಮ್ಮ ದೇವಿ ದೇವಸ್ಥಾನದಲ್ಲಿ ನಾಡಿದ್ದು ದಿನಾಂಕ 9ರ ಶುಕ್ರವಾರ ಅವರಾತ್ರಿ ಅಮಾವಾಸ್ಯೆ ಪ್ರಯುಕ್ತ ಬೆಳಿಗ್ಗೆ ಶ್ರೀ ಸ್ವಾಮಿಗೆ ಅಭಿಷೇಕ, ಪೂಜೆ, ಹೂವಿನ ಅಲಂಕಾರ ನಡೆಯುವುದು.
ನಂತರ ಮಧ್ಯಾಹ್ನ 12.30ಕ್ಕೆ ಸರ್ವ ಭಕ್ತಾದಿಗಳಿಗೆ ದಾಸೋಹ ಏರ್ಪಡಿಸಲಾಗಿದೆ. ಶ್ರೀಮತಿ ಶ್ರೀಮತಿ ವಿಜಯ ಜ್ಯೋತಿ ಎಂ.ಕೆ. ನಾಗರಾಜ್ ಸುಚೇತಾ, ಸ್ಮೃತಿ ನವೀನ, ಅನೀಶ್, ಶಂಶಿ, ಮತ್ತು ಶ್ರೀಮತಿ ದಾ. ಶೋಭಾ ಬಸವರಾಜ್ ಗೌಡ ಪಾಟೀಲ, ಅರುಣ್ ಅಭಿಷೇಕ ಪಾಟೀಲ ಕುಟುಂಬದವರು ಇವರು ದಾಸೋಹದ ಸೇವಾರ್ಥಿಗಳಾಗಿದ್ದಾರೆ.