ರಾಣೇಬೆನ್ನೂರು ತಾಲ್ಲೂಕಿನ ಮುಷ್ಟೂರು ಗ್ರಾಮದಲ್ಲಿ ಇಂದು ಶ್ರೀ ಚೌಡೇಶ್ವರಿ ಜಾತ್ರೆಯ ನಿಮಿತ್ಯವಾಗಿ ದಾವಣಗೆರೆಯ ವಸಂತ ಕಲಾ ನಾಟ್ಯ ಸಂಘದವರಿಂದ ‘ಸತಿ ಸಂಸಾರದ ಜ್ಯೋತಿ ಅರ್ಥಾತ್ ಅಕ್ಕ ಅಳಲಿಲ್ಲ, ತಂಗಿ ನಗಲಿಲ್ಲ ಎಂಬ ಕೌಟುಂಬಿಕ ಸುಂದರ ಸಾಮಾಜಿಕ ಬಯಲು ನಾಟಕ ಇಂದು ರಾತ್ರಿ 10 ಘಂಟೆಗೆ ಜರುಗಲಿದೆ.
ಉದ್ಘಾಟನೆಯನ್ನು ಶಾಸಕ ಪ್ರಕಾಶ ಕೋಳಿವಾಡ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ತಾ.ಪಂ. ಮಾಜಿ ಅಧ್ಯಕ್ಷ, ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಎಫ್. ಪಾಟೀಲ ವಹಿಸುವರು. ಮುಖ್ಯ ಅತಿಥಿಗಳಾಗಿ ತಹಶೀಲ್ದಾರ್ ಹನುಮಂತಪ್ಪ ಶಿರಹಟ್ಟಿ ಇನ್ನೂ ಮುಂತಾದ ಗಣ್ಯಮಾನ್ಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಾಧನೆಗೈದ ಅನೇಕ ಗಣ್ಯಮಾನ್ಯರನ್ನು ಸತ್ಕರಸಲಾಗುವುದೆಂದು ಚೌಡೇಶ್ವರಿ ಜಾತ್ರಾ ಮಹೋತ್ಸವ ಕಮಿಟಿಯವರು ತಿಳಿಸಿದ್ದಾರೆ.