ದಾವಣಗೆರೆ, ಜ.5- ನಗರದ ನಿಟುವಳ್ಳಿ ರಸ್ತೆಯಲ್ಲಿ ಶನಿವಾರ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಶಕ್ತಿ ನಗರದ ನಿವಾಸಿ ಗಣೇಶ್ ಎಸ್. (45) ಮೃತಪಟ್ಟಿದ್ದಾರೆ. ರಸ್ತೆ ಬದಿ ಫ್ಲೆಕ್ಸ್ ಅಳವಡಿಸಿದ್ದ ಕಂಬಕ್ಕೆ ಟೆಂಪೋ ಟ್ರಾವೆಲರ್ ಗುದ್ದಿದ್ದು, ಅದೇ ಮಾರ್ಗದಲ್ಲಿ ಬರುತ್ತಿದ್ದ ಗಣೇಶ್ ಎಸ್. ಅವರ ತಲೆಗೆ ಕಂಬ ಬಿದ್ದಿದೆ. ಟೆಂಪೋ ಕೂಡ ಅವರಿಗೆ ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ಗಣೇಶ್ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಟೆಂಪೋ ಟ್ರಾವೆಲರ್ ಚಾಲಕ, ತುಮಕೂರು ಜಿಲ್ಲೆಯ ಪಾವಗಡದ ನಿವಾಸಿ ಕೆ. ಚಂದ್ರಶೇಖರ್ ವಿರುದ್ಧ ನಿರ್ಲಕ್ಷ್ಯದ ಆರೋಪದಡಿ ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
February 28, 2025