ದಾವಣಗೆರೆ, ಫೆ.5- ದಾವಣಗೆರೆ-ಹರಿಹರ ಪಿ.ಬಿ.ರಸ್ತೆಯ ರೈಲ್ವೆ ಹಳಿ ಬಳಿ ಬೋಂಗಾಳೆ ರೈಸ್‍ಮಿಲ್ ಹತ್ತಿರ ಜ.30 ರಂದು ಸುಮಾರು 40-45 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿ ಜಾಲಿ ಗಿಡಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆ. ಹುಳಗಳು ಮುತ್ತಿಕೊಂಡಿದ್ದರಿಂದ ಶವವು ಸಂಪೂರ್ಣ ಕೊಳೆತುಹೋಗಿದೆ. ಮೃತನ ಹೆಸರು, ವಿಳಾಸ ಹಾಗೂ ವಾರಸುದಾರರು ಯಾರೆಂದು ತಿಳಿದು ಬಂದಿರುವುದಿಲ್ಲ. ತೆಳುವಾದ ಮೈಕಟ್ಟು, ತಲೆಯ ಹಿಂಭಾಗದಲ್ಲಿ 1 ಇಂಚು ಕೂದಲು ಚಹರೆ ಹೊಂದಿರುವ ಮೃತದೇಹವು ಸಂಪೂರ್ಣ ಕೊಳೆತು ಹೋಗಿದೆ. ಮಾಸಲು ಬಣ್ಣದ ಶರ್ಟ್, ಕಪ್ಪು ಪ್ಯಾಂಟ್ ಇರುತ್ತದೆ. ಸಂಬಂಧಪಟ್ಟವರು ಹರಿಹರ ಗ್ರಾಮಾಂತರ ಪೊಲೀಸ್ ಠಾಣೆ ದೂ.ಸಂ. 08192-272017, 9480803258, ಹರಿಹರ ವೃತ್ತ ಕಚೇರಿ 08192-271018 ಹಾಗೂ ದಾವಣಗೆರೆ ಎಸ್.ಪಿ.ಕಚೇರಿ 08192-253400 ನ್ನು ಸಂಪರ್ಕಿಸುವಂತೆ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‍ಐ ಅಬ್ದುಲ್ ಖಾದರ್ ಜಿಲಾನಿ ತಿಳಿಸಿದ್ದಾರೆ.
January 15, 2025