ಸಂವಿಧಾನದ ಆಶಯವನ್ನು ಜನಸಾಮಾನ್ಯರಿಗೆ ತಿಳಿಸಿಕೊಡಲು ಸಂವಿಧಾನ ಜಾಗೃತಿ ಜಾಥಾ ಜಿಲ್ಲೆಯಾದ್ಯಂತ ನಡೆಯತ್ತಿದ್ದು, ಇಂದು – ನಾಳೆ ಹೊನ್ನಾಳಿ ಮತ್ತು ಚನ್ನಗಿರಿ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಳಗಳಲ್ಲಿ ಸಂಚರಿಸಲಿದೆ ಎಂದು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗರಾಜ ತಿಳಿಸಿದ್ದಾರೆ.
ಜಾಥಾವು ಹೊನ್ನಾಳಿ ತಾಲ್ಲೂಕಿನ ಕಮ್ಮಾರಘಟ್ಟ-ಬೆನಕನಹಳ್ಳಿ, ಚನ್ನಗಿರಿ ತಾಲ್ಲೂಕಿನ ಬೆನಕನಹಳ್ಳಿ-ಬೀರಗೊಂಡನಹಳ್ಳಿ, ಬೀರಗೊಂಡನ ಹಳ್ಳಿ-ರಾಂಪುರ, ರಾಂಪುರ-ಸಾಸ್ವೆಹಳ್ಳಿ, ಹೊನ್ನಾಳಿ ತಾಲ್ಲೂಕಿನ ಸಾಸ್ವೆಹಳ್ಳಿ-ಕುಳಗಟ್ಟೆ, ಕುಳಗಟ್ಟೆ-ಹೊಸಹಳ್ಳಿ, ಹೊಸಹಳ್ಳಿ-ಲಿಂಗಾಪುರ ಜಾಥಾವು ಲಿಂಗಾಪುರ ಗ್ರಾಮದಿಂದ ಮುಂದಿನ ಗ್ರಾಮಗಳಿಗೆ ಸಂಚರಿಸಲಿದೆ.
ನಾಳೆ ಹೊನ್ನಾಳಿ ತಾಲ್ಲೂಕಿನ ಲಿಂಗಾಪುರ-ಹುಣಸಘಟ್ಟ, ಹುಣಸಘಟ್ಟ-ಕ್ಯಾಸನಕೆರೆ, ಕ್ಯಾಸನಕೆರೆ-ಜಿ.ಕೊಮಾರನಹಳ್ಳಿ, ಚನ್ನಗಿರಿ ತಾಲ್ಲೂಕಿನ ಜಿ.ಕೊಮಾರನಹಳ್ಳಿ-ನಿಲೋಗಲ್, ನಿಲೋಗಲ್-ದಾಗಿನಕಟ್ಟೆ, ದಾಗಿನಕಟ್ಟೆ-ಬಸವಾಪಟ್ಟಣ, ಬಸವಾಪಟ್ಟಣ-ಕೋಟೆಹಾಳ್ ಜಾಥಾವು ಕೋಟೆಹಾಳ್ನಿಂದ ಮುಂದಿನ ಗ್ರಾಮಗಳಿಗೆ ಸಂಚರಿಸಲಿದೆ. ಗ್ರಾಮಸ್ಥರು, ಸಾರ್ವಜನಿಕರು ಜಾಥಾ ಯಶ್ವಸಿಗೊಳಿಸಲು ಕೋರಿದ್ದಾರೆ.