ದಾವಣಗೆರೆ, ಫೆ.4 – ದಾವಣಗೆರೆ ಜಿಲ್ಲೆಯಾದ್ಯಂತ ಖಾಲಿ ಇರುವ (59 ಪುರುಷ + 10 ಮಹಿಳೆ) ಒಟ್ಟು 69 ಸ್ವಯಂ ಸೇವಾ ಗೃಹರಕ್ಷಕರ ಸ್ಥಾನಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
19 ರಿಂದ 45 ವರ್ಷ ವಯೋಮಾನದೊಳಗಿನವರಾಗಿಬೇಕು. 10 ನೇ ತರಗತಿ ಪಾಸಾಗಿರುವ, ಆರೋಗ್ಯವಂತ ಉತ್ತಮ ದೈಹಿಕ ಸಾಮರ್ಥ್ಯ ಹೊಂದಿದವರು, ರಾಜಕೀಯ ಪಕ್ಷ-ಸಂಘ ಸಂಸ್ಥೆಗಳ ಸದಸ್ಯರು, ಕಾರ್ಯಕರ್ತರಾಗಿರಬಾರದು. ಕಾನೂನು ಮೊಕದ್ದಮೆಗಳಲ್ಲದವರು ಹಾಗೂ ಸಂಬಂಧಪಟ್ಟ ಘಟಕಗಳಿಂದ 6 ಕಿ.ಮೀ ವ್ಯಾಪ್ತಿಯೊಳಗಿನ, ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ದಾವಣಗೆರೆ ಘಟಕದಲ್ಲಿ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.
ಖಾಲಿ ಇರುವ ಹುದ್ದೆಗಳ ವಿವರ : ಹರಿಹರ-3, ಮಲೇಬೆನ್ನೂರು-7, ಹೊನ್ನಾಳಿ-4, ನ್ಯಾಮತಿ-15, ಚನ್ನಗಿರಿ-3, ಸಂತೇಬೆನ್ನೂರು-4, ಜಗಳೂರು-8, ಬಿಳಿಚೋಡು-11, ಬಸವನಕೋಟೆ-4 ಸ್ಥಾನಗಳು ಖಾಲಿ ಇರುತ್ತವೆ.
ಇದೇ ದಿನಾಂಕ 9 ರಿಂದ ಕಚೇರಿ ವೇಳೆಯಲ್ಲಿ ಅರ್ಜಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಕಚೇರಿಗೆ ದಿನಾಂಕ 12 ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಮಾದೇಷ್ಟರ ಕಚೇರಿ, ದೇವರಾಜ್ ಅರಸ್ ಬಡಾವಣೆ ಬಿ ಬ್ಲಾಕ್, ಶಿವಪಾರ್ವತಿ ಕಲ್ಯಾಣ ಮಂಟಪ ಪಕ್ಕ, ಶಿವಾಲಯ ಹಿಂಭಾಗ, ದಾವಣಗೆರೆ-577006 ದೂ.ಸಂ: 08192-250784 ಸಂಪರ್ಕಿಸಬಹುದು.