ಡಾ. ಪಂಡಿತ ಪುಟ್ಟರಾಜ ಸೇವಾ ಸಮಿತಿ ಗದಗ, ಜಿಲ್ಲಾ ಮಹಿಳಾ ಘಟಕ, ದಾವಣಗೆರೆ ಜಿಲ್ಲಾ ವಚನಾಮೃತ ಬಳಗ ಇವರ ಸಹಯೋಗದಲ್ಲಿ ಇಂದು ಮಧ್ಯಾಹ್ನ 2.30 ಕ್ಕೆ ಹಳೇ ದಾವಣಗೆರೆ ದುಗ್ಗಮ್ಮ ದೇವಸ್ಥಾನದ ಎದುರಿಗಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ವಚನ ಶಿಬಿರ, ಪಂಚಾಕ್ಷರಿ ಗವಾಯಿಗಳ ಜಯಂತಿ ಹಾಗೂ ಕವಿಗೋಷ್ಠಿ ಏರ್ಪಡಿಸಲಾಗಿದೆ. ಡಾ.ಪಂಡಿತ್ ಪುಟ್ಟರಾಜ ಸೇವಾ ಸಮಿತಿ ಅಧ್ಯಕ್ಷೆ ಸೌಮ್ಯ ಸತೀಶ್ ಧಾರವಾಡ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ವಡೇರಹಳ್ಳಿ ಸಂಗೀತ ಶಿಕ್ಷಕ ಶಿವಬಸವಸ್ವಾಮಿ, ಎಸ್ಡಿಎಂಸಿ ಅಧ್ಯಕ್ಷ ಹೆಚ್.ಆರ್.ನಿಂಗರಾಜ್, ಮುಖ್ಯ ಶಿಕ್ಷಕಿ ಕಲ್ಲಮ್ಮ, .ಡಾ. ಪಂಡಿತ ಪುಟ್ಟರಾಜ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಪಿ.ಬಿ. ವಿನಾಯಕ ಮತ್ತಿತರರು ಭಾಗವಹಿಸಲಿದ್ದಾರೆ.
January 11, 2025