ದಾವಣಗೆರೆ, ಫೆ. 2- ದಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಮಲ್ನಾಡ್ ಓಪನ್ ಗ್ರೂಪ್ ಸಹಯೋಗದಲ್ಲಿ ಶಿವಮೊಗ್ಗದಲ್ಲಿ ಆಯೋಜಿಸಲಾಗಿದ್ದ ಗಣರಾಜ್ಯೋತ್ಸವದಲ್ಲಿ ನಗರದ ದೃಶ್ಯ ಕಲಾ ಮಹಾವಿದ್ಯಾಲಯದ 3ನೇ ಸೆಮಿಸ್ಟರ್ ಪೇಂಟಿಂಗ್ ವಿದ್ಯಾರ್ಥಿ
ಎನ್.ಗೌತಮ್ ಅವರಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪುರಸ್ಕಾರ ಪ್ರಶಸ್ತಿ ಪತ್ರ ನೀಡಲಾಗಿದೆ. ಗೌತಮ್ ಅವರು ಶಿವಮೊಗ್ಗದ ಎ.ಒ. ನಾಗರಾಜು ಅವರ ಪುತ್ರ. ಗೌತಮ್‌ಗೆ ದೃಶ್ಯಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಜೈರಾಜ್ ಎಂ. ಚಿಕ್ಕಪಾಟೀಲ ಅಭಿನಂದಿಸಿದ್ದಾರೆ.
January 11, 2025