ಬಜೆಟ್ ಮೋದಿ ಸರ್ಕಾರದ ಬೂಸ್ಟರ್ ಡೋಸ್: ಪ್ರಸನ್ನ

ಬಜೆಟ್ ಮೋದಿ ಸರ್ಕಾರದ ಬೂಸ್ಟರ್ ಡೋಸ್: ಪ್ರಸನ್ನ

ವಿಕಸಿತ ಭಾರತಕ್ಕೆ ಪ್ರಸಕ್ತ ಬಜೆಟ್ ಮೋದಿ ಸರ್ಕಾರದ ಬೂಸ್ಟರ್ ಡೋಸ್ ಆಗಿದೆ ಎಂದು ಮಹಾನಗರ ಪಾಲಿಕೆ ಸದಸ್ಯ ಕೆ. ಪ್ರಸನ್ನ ಕುಮಾರ್ ಹೇಳಿದ್ದಾರೆ.

ಇದು ಸ್ವಾವಲಂಭಿ ಭಾರತಕ್ಕೆ ಭದ್ರ ಬುನಾದಿಯಾಗುವ, ದೇಶದಲ್ಲಿ 80 ಲಕ್ಷ ಮಹಿಳಾ ಸ್ವಸಹಾಯ ಸಂಘದ 1 ಕೋಟಿ ಮಹಿಳೆಯರು ಸ್ವಯಂ ಉದ್ಯೋಗದಡಿ ಲಕ್ಷಾದಿಪತಿಗಳಾಗಿದ್ದು, ಇದನ್ನು 9 ಕೋಟಿ ಮಹಿಳೆಯರ ಆರ್ಥಿ ಸಬಲೀಕರಣಕ್ಕಾಗಿ ವಿಸ್ತರಿಸುವ ಲಖ್ ಪತಿ ದೀದಿ ಯೋಜನೆ ಮಹಿಳೆಯರನ್ನು ಸ್ವಾಲಂಬಿಗಳಾಗಿಸುವುದರ ಜೊತೆಗೆ, ಕುಟುಂಬದ ಆದಾಯ ಹೆಚ್ಚಿಸಲಿದೆ. ಸಣ್ಣ ಸಣ್ಣ ಆಹಾರ ತಯಾರಿಕೆ ಘಟಕಗಳಿಗೆ, ಹಣಕಾಸಿನ ನೆರವು ನೀಡುವ ಯೋಜನೆ (ಮೈಕ್ರೊ ಫುಡ್ ಪ್ರೋಸೆಸಿಂಗ್ ಯೋಜನೆ), 1 ಕೋಟಿ ಮನೆಯ ಮೇಲೆ ಸೋಲಾರ್ ವಿದ್ಯುತ್ ಅಳವಡಿಕೆ, ಸರ್ವ ಜನಾಂಗದ, ಸರ್ವಸ್ಪರ್ಶಿ ಮತ್ತು ಸಾಮಾಜಿಕ ನ್ಯಾಯ ಒದಗಿಸುವ‌, ಅಭಿವೃಧ್ಧಿ, ತಂತ್ರಜ್ಞಾನ ಮತ್ತು ವೈಜ್ಞಾನಿಕ ಭಾರತದ ಏಳಿಗೆಯ ಬಜೆಟ್ ಆಗಿದೆ ಎಂದವರು ಹೇಳಿದ್ದಾರೆ.

error: Content is protected !!