ಆತ್ಮವಿಶ್ವಾಸದ ಬಜೆಟ್

ಆತ್ಮವಿಶ್ವಾಸದ ಬಜೆಟ್

ವಿತ್ತೀಯ ಕೊರತೆಯನ್ನು ಶೇ.5.1ಕ್ಕೆ ಇಳಿಸಿರುವುದು ಅಭಿವೃದ್ಧಿಯ ದೃಷ್ಟಿಯಿಂದ ಮತ್ತು ಹಣದುಬ್ಬರದ ಕಡಿತಕ್ಕೆ ನೆರವಾಗಲಿದೆ ಎಂದು ಮಾಯಕೊಂಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ಸಹ ಪ್ರಾಧ್ಯಾಪಕ ಡಾ. ಜಿ.ಎಂ. ದಿನೇಶ್ ಹೇಳಿದ್ದಾರೆ.  ಗ್ರಾಮೀಣ ಗೃಹ ನಿರ್ಮಾಣ, ಮೂಲಭೂತ ಸೌಕರ್ಯಕ್ಕೆ ಒತ್ತು, ಸೌರಶಕ್ತಿ ಬಳಕೆಗೆ ಪ್ರಾತಿನಿಧ್ಯತೆ, ನಾರಿ ಶಕ್ತಿಗೆ ಒಲವು, ಲಕ್ಷಾಧಿಪತಿ ದೀದಿ ಯೋಜನೆ ಜಾರಿ, ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುವ ಮೂಲಕ ಹೊಸ ಜನಪರ ಯೋಜನೆಗಳಿಲ್ಲದ ಅಭಿವೃದ್ಧಿ ಪರ ಬಜೆಟ್ ಇದಾಗಿದೆ. ತೆರಿಗೆ ಪಾವತಿದಾರರಿಗೆ ಮತ್ತೊಮ್ಮೆ ನಿರಾಸೆ ಮೂಡಿದೆ, ಒಟ್ಟಾರೆ ಅತಿ ಆತ್ಮವಿಶ್ವಾಸದ ಮುಂಗಡ ಪತ್ರ ಇದಾಗಿದೆ ಎಂದವರು ಹೇಳಿದ್ದಾರೆ.

error: Content is protected !!