ಆಶಾದಾಯಕ ಮತ್ತು ಚುನಾವಣಾ ಪೂರ್ವ ಮುಂಗಡ ಪತ್ರ : ರಾಧೇಶ್ ಜಂಬಗಿ

ಆಶಾದಾಯಕ ಮತ್ತು ಚುನಾವಣಾ ಪೂರ್ವ ಮುಂಗಡ ಪತ್ರ : ರಾಧೇಶ್ ಜಂಬಗಿ

ದಾವಣಗೆರೆ, ಫೆ. 1 – 2024-25ನೇ ಸಾಲಿನ 2 ತಿಂಗಳ ಲೇಖಾನುದಾನ ಮುಂಗಡ ಪತ್ರ ಮಂಡಿಸಿದ್ದು ಶ್ರೀ ಸಾಮಾನ್ಯನಿಗೆ ಆಶಾದಾಯಕವಾಗಿದ್ದು, ಆದಾಯ ತೆರಿಗೆಯಲ್ಲಿ ಹೊಸ ಮತ್ತು ಹಳೆಯ ತೆರಿಗೆ ಪದ್ದತಿಯಲ್ಲಿ ಯಾವುದೇ ರೀತಿಯ ಮಾರ್ಪಾಡುಗಳನ್ನು ಮಾಡದೇ ಇರುವುದು ಮದ್ಯಮ ವರ್ಗದ ಮತ್ತು ಸಂಬಳದಾರರಿಗೆ ಅನುಕೂಲವಾಗಿರುತ್ತದೆ ಮತ್ತು ಕರ್ನಾಟಕ ರಾಜ್ಯಕ್ಕೆ ಅದರಲ್ಲೂ ಬೆಂಗಳೂರಿಗೆ ವರದಾನವಾಗಿದೆ.

ರಕ್ಷಣಾ ಇಲಾಖೆಗೆ ಹೆಚ್ಚಿನ ಹಣ ಕ್ರೋಢೀಕರಿಸಿದ್ದು ಗಡಿ ಭಾಗದ ಸೈನಿಕರಿಗೆ ಆಶಾದಾಯಕವಾಗಿದೆ, ಅದರಲ್ಲಿ ಹೆಚ್ಚಿನ ರೀತಿಯ ಅನುಕೂಲತೆಗಳನ್ನು ರಕ್ಷಣಾ ಸೈನಿಕರಿಗೆ ಕೊಟ್ಟಿರುವುದು ಆಶಾದಾಯಕ. 

ಮೇಕ್-ಇನ್-ಇಂಡಿಯಾ ಕಳೆದ ವರ್ಷದಿಂದ ಹಣವನ್ನು ಕ್ರೋಢೀಕರಿಸಿ ಒSಒಇ ಅಡಿಯಲ್ಲಿ ದಾಖಲಾತಿಯ ಕೈಗಾರಿಕೋದ್ಯಮ ಕಾರ್ಯಗತವಾಗಿದ್ದು ಶುಭಸೂಚನೆಯಾಗಿದೆ. 

ಜಿ.ಎಸ್.ಟಿ ಯಲ್ಲಿ 2017-18, 2018-19 ರ ಸಾಲಿಗೆ ಕ್ಷಮಾದಾನ ಯೋಜನೆ ಪ್ರಕಟಿಸದಿರುವುದು ನಿಜಕ್ಕೂ ಶೋಚನೀಯ, ಇದನ್ನು ಮುಂದಿನ ದಿನಗಳಲ್ಲಿ ಕ್ಷಮಾದಾನ ಯೋಜನೆ ತಂದಲ್ಲಿ ವ್ಯಾಪಾರಸ್ತರು ಕೈಗಾರಿಕೊದ್ಯಮಿಗಳಿಗೆ ಸರಕು ಮತ್ತು ಸೇವಾ ತೆರಿಗೆ ಕಟ್ಟುವಲ್ಲಿ ಹೆಚ್ಚುವರಿ ಅನುಕೂಲ ಕೊಟ್ಟಂತಾಗುತ್ತದೆ. 

ಒಟ್ಟು 2024-25ನೇ ಸಾಲಿಗೆ ಕೇಂದ್ರ
ಸರ್ಕಾರದ 2 ತಿಂಗಳ ಲೇಖಾನುದಾನ ಮುಂಗಡ ಪತ್ರ ಆಶಾದಾಯಕ ಮತ್ತು ಚುನಾವಣಾ ಪೂರ್ವ ಲೇಖಾನುದಾನ ಮುಂಗಡ ಪತ್ರವಾಗಿರುತ್ತದೆ ಎಂದು ದಾವಣಗೆರೆ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಜಂಬಗಿ ರಾಧೇಶ್ ತಿಳಿಸಿದ್ದಾರೆ

error: Content is protected !!