ದಾವಣಗೆರೆ: ಶ್ರೀಶೈಲ ಮಲ್ಲಿಕಾರ್ಜುನ ವಿವಿಧ ನಾಟಕ ಕಲಾವಿದರ ಸಂಘದಿಂದ ಇಂದು ಮಂಗಳವಾರ ಆವರಗೆರೆ ಗ್ರಾಮದಲ್ಲಿ ಶ್ರೀ ಬನಶಂಕರಿ ದೇವಿ ಜಾತ್ರೆ ಪ್ರಯುಕ್ತ ನೀಲಗುಂದ ಬಸವನಗೌಡ್ರು ಸಾರಥ್ಯದಲ್ಲಿ `ಚೋರ ಗುರು ಚಾಂಡಾಲ ಶಿಷ್ಯ’ ಸಾಮಾಜಿಕ ನಗೆ ನಾಟಕ ಪ್ರದರ್ಶನವಾಗಲಿದೆ. ರಾತ್ರಿ 10.30ಕ್ಕೆ ನಡೆಯುವ ನಾಟಕ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಮಾಜಿ ಮೇಯರ್ ಜಯಮ್ಮ ಗೋಪಿ ನಾಯ್ಕ ವಹಿಸಲಿದ್ದು, ಸಚಿವ ಎಸ್.ಎಸ್. ಮಲ್ಲಿಕಾ ರ್ಜುನ್ ಉದ್ಘಾಟಿಸಲಿದ್ದಾರೆ. ಸಂಸದ ಜಿ.ಎಂ. ಸಿದ್ದೇಶ್ವರ್ ಆಗಮಿಸಲಿದ್ದಾರೆ. ನಾಟಕಕ್ಕೆ ಉಚಿತ ಪ್ರವೇಶವಿದೆ ಎಂದು ಸಂಘದ ಅಧ್ಯಕ್ಷ ನೀಲಗುಂದ ಬಸವನಗೌಡ್ರು, ಸಂಚಾಲಕ ಪಿ.ಖಾದರ್, ಡಿ.ಜಿ. ನಾಗರಾಜಪ್ಪ ಮುದಹದಡಿ ತಿಳಿಸಿದ್ದಾರೆ.
January 11, 2025