ದಾವಣಗೆರೆ, ಜ.28- ಪ್ರಜಾ ಪರಿವರ್ತನಾ ವೇದಿಕೆ ಜಿಲ್ಲಾ ಘಟಕದಿಂದ ಸಂವಿಧಾನ ಜಾಗೃತಿ ಹಾಗೂ ಜೋಗೇಂದ್ರ ಸಿಂಗ್ ಮಂಡಲ್ ಜನ್ಮ ದಿನ ಕಾರ್ಯಕ್ರಮವನ್ನು ನಾಳೆ ದಿನಾಂಕ 29ರಂದು ಬೆಳಿಗ್ಗೆ 11.30ಕ್ಕೆ ನಗರದ ರೋಟರಿ ಬಾಲಭವನದಲ್ಲಿ ಏರ್ಪಡಿಸಲಾಗಿದೆ ಎಂದು ವೇದಿಕೆಯ ರಾಜ್ಯ ಕಾರ್ಯಾಧ್ಯಕ್ಷ ಎ.ಡಿ. ಈಶ್ವರಪ್ಪ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಶ್ರೀ ಉರಿಲಿಂಗಿ ಪೆದ್ದಮಠದ ಜ್ಞಾನಪ್ರಕಾಶ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಪ್ರಜಾ ಪರಿವರ್ತನಾ ವೇದಿಕೆ ರಾಜ್ಯಾಧ್ಯಕ್ಷ ಬಿ. ಗೋಪಾಲ್ ಕಾರ್ಯಕ್ರಮ ಉದ್ಘಾಟಿಸುವರು. ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಸಂವಿಧಾನ ಪೀಠಿಕೆ ಅನಾವರಣಗೊಳಿಸಲಿದ್ದಾರೆ ಎಂದರು.
ವೇದಿಕೆಯ ಜಿಲ್ಲಾಧ್ಯಕ್ಷ ಎಚ್.ಕೆ. ಕೃಷ್ಣ ಅರಕೆರೆ ಅಧ್ಯಕ್ಷತೆ ವಹಿಸಲಿದ್ದಾರೆ. ವೇದಿಕೆಯ ರಾಜ್ಯ ಉಪಾಧ್ಯಕ್ಷ ಡಾ. ಸೈಯ್ಯದ್ ರೋಷನ್ ಮುಲ್ಲಾ ಉಪನ್ಯಾಸ ನೀಡುವರು. ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎನ್. ರುದ್ರಮುನಿ, ಪ್ರಜಾಪರಿವರ್ತನಾ ವೇದಿಕೆ ಉಪಾಧ್ಯಕ್ಷೆ ಕಾಂಚನಾ ಎನ್., ಶಿಕ್ಷಕ ಎ.ಕೆ. ಚನ್ನೇಶ್ವರ, ಕೆ.ಓ. ಮಂಜಪ್ಪ, ಬಾಬಾಸಾಹೇಬ್ ಅಂಬೇಡ್ಕರ್ ಜನಸೇವಾ ಸಮಿತಿ ಉಪಾಧ್ಯಕ್ಷ ಭೀಮಪ್ಪ ಪಿ. ಭಾಗವಹಿಸುವರು. ಕಾರ್ಯಕ್ರಮ ನಿಮಿತ್ತ ಬೈಕ್ ರಾಲಿ ನಡೆಸಲಾಗುವುದು ಎಂದು ತಿಳಿಸಿದರು.
ಪ್ರಜಾಪರಿವರ್ತನಾ ವೇದಿಕೆಯ ಪ್ರಮುಖರಾದ ಎಚ್.ಕೆ. ಕೃಷ್ಣ ಅರಕೆರೆ, ಮನೋಹರ, ಧನ್ಯಕುಮಾರ್, ಹನುಮಂತಪ್ಪ, ತಿಪ್ಪೇಸ್ವಾಮಿ, ಅಜಯ್ ಎಂ. ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.