ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಇಂದು ಶಿವಾನುಭವ ಗೋಷ್ಠಿ

ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಇಂದು ಶಿವಾನುಭವ ಗೋಷ್ಠಿ

ಬಾಡಾ ಕ್ರಾಸ್‌ನಲ್ಲಿರುವ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಇಂದು 11.30ಕ್ಕೆ  275ನೇ ಬನದ ಹುಣ್ಣಿಮೆ, ಶಿವಾನುಭವ ಗೋಷ್ಠಿ ಮತ್ತು ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಾನ್ನಿಧ್ಯವನ್ನು ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ (ಆವರಗೊಳ್ಳ), ಶ್ರೀ ಕಲ್ಲಯ್ಯಜ್ಜನವರು (ಶ್ರೀ ವೀರೇಶ್ವರ ಪುಣ್ಯಾಶ್ರಮ) ವಹಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಮನೂರು ಶಿವಶಂಕರಪ್ಪ, ಅಥಣಿ ಎಸ್. ವೀರಣ್ಣ ವಹಿಸುವರು. ಮುಖ್ಯ ಅತಿಥಿಗಳಾಗಿ ಅಣಬೇರು ರಾಜಣ್ಣ, ದೇವರಮನಿ ಶಿವಕುಮಾರ್, ಜೆ.ಎನ್. ಕರಿಬಸಪ್ಪ, ದೊಗ್ಗಳ್ಳಿ ವಿಜಯಪ್ರಕಾಶ್, ಶ್ರೀಮತಿ ಹರ್ಷಿತ ಬಿ.ಜಿ., ಬಸವರಾಜಪ್ಪ ಬಿ.ಜಿ. ಕು.ಮಮತ ಎನ್.ಎಸ್. ಆಗಮಿಸುವರು. 

error: Content is protected !!