ರಾಜ್ಯ ಪತ್ರಕರ್ತರ ಸಮ್ಮೇಳನದ ಸ್ವಾಗತ ಸಮಿತಿಗೆ ಎಸ್ಸೆಸ್ಸೆಂ ಅಧ್ಯಕ್ಷ

ರಾಜ್ಯ ಪತ್ರಕರ್ತರ ಸಮ್ಮೇಳನದ ಸ್ವಾಗತ ಸಮಿತಿಗೆ ಎಸ್ಸೆಸ್ಸೆಂ ಅಧ್ಯಕ್ಷ

ಮಹಾಪೋಷಕರಾಗಿ ಹಿರಿಯ ಶಾಸಕ ಎಸ್ಸೆಸ್, ಪೋಷಕರಾಗಿ ಸಂಸದ ಸಿದ್ದೇಶ್ವರ

ದಾವಣಗೆರೆ,ಜ.24- ಬರುವ ಫೆಬ್ರವರಿ 3 ಮತ್ತು 4ರಂದು ನಗರದಲ್ಲಿ ನಡೆಯಲಿರುವ 38ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಮಲ್ಲಿಕಾರ್ಜುನ್, ಮಹಾಪೋಷಕರಾಗಿ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಪೋಷಕರಾಗಿ ಲೋಕಸಭಾ ಸದಸ್ಯ ಜಿ.ಎಂ.ಸಿದ್ದೇಶ್ವರ ಆಯ್ಕೆಯಾಗಿದ್ದಾರೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ನೇತೃತ್ವ ಮತ್ತು ಸಂಘದ ಜಿಲ್ಲಾ ಘಟಕದ ಆತಿಥ್ಯದಲ್ಲಿ ಜಿಲ್ಲಾ ವರದಿಗಾರರ ಕೂಟದ ಸಹಯೋಗದೊಂದಿಗೆ ಈ ಸಮ್ಮೇಳನ ಏರ್ಪಾಡಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷರೂ ಆಗಿರುವ ಸಮ್ಮೇಳನದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಇ.ಎಂ. ಮಂಜುನಾಥ ಏಕಬೋಟೆ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕಳೆದ 31 ವರ್ಷಗಳ ಹಿಂದೆ ನಗರದಲ್ಲಿ ನಡೆದಿದ್ದ ಈ ಸಮ್ಮೇಳನವು ದಾವಣಗೆರೆ ಜಿಲ್ಲೆಯಾದ 25 ವರ್ಷಗಳ ನಂತರ ಇದೇ ಪ್ರಪ್ರಥಮ ಬಾರಿಗೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸಮ್ಮೇಳನವನ್ನು ಅರ್ಥಪೂರ್ಣ ಮತ್ತು ವಿಭಿನ್ನವಾಗಿ ನಡೆಸುವ ನಿಟ್ಟಿನಲ್ಲಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಪರಿಗಣಿಸಲ್ಪಟ್ಟಿರುವ ಮಾಧ್ಯಮ ಕ್ಷೇತ್ರದ ಎಲ್ಲಾ ಪತ್ರಕರ್ತರು ಮತ್ತು ಜನಪ್ರತಿನಿಧಿಗಳನ್ನೊಳಗೊಂಡಂತೆ ಸಮ್ಮೇಳನದ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ ಎಂದು ಅವರು ಹೇಳಿದರು.

ಮಹಾನಗರ ಪಾಲಿಕೆ ಮಹಾಪೌರರಾದ ವಿನಾಯಕ ಪೈಲ್ವಾನ್, ಉಪ ಮಹಾಪೌರರಾದ ಶ್ರೀಮತಿ ಯಶೋಧ ಹೆಗ್ಗಪ್ಪ, ಶಾಸಕರುಗಳಾದ ಮಾಯಕೊಂಡದ ಕೆ.ಎಸ್. ಬಸವಂತಪ್ಪ, ಹರಿಹರದ ಬಿ.ಪಿ. ಹರೀಶ್, ಜಗಳೂರಿನ ಬಿ. ದೇವೇಂದ್ರಪ್ಪ, ಹೊನ್ನಾಳಿಯ ಡಿ.ಜಿ. ಶಾಂತನಗೌಡ, ಚನ್ನಗಿರಿಯ ಬಸವರಾಜು ವಿ. ಶಿವಗಂಗಾ ಅವರುಗಳು ಉಪಾಧ್ಯಕ್ಷರುಗಳಾಗಿದ್ದಾರೆ.

ವಿಧಾನ ಪರಿಷತ್ ಸದಸ್ಯರುಗಳಾದ ಕೆ.ಅಬ್ದುಲ್ ಜಬ್ಬಾರ್, ಕೆ.ಪಿ. ನಂಜುಂಡಿ ವಿಶ್ವಕರ್ಮ, ಎನ್. ರವಿಕುಮಾರ್, ಶ್ರೀಮತಿ ತೇಜಸ್ವಿನಿ ಗೌಡ, ಎಸ್.ಎಲ್. ಭೋಜೇಗೌಡ, ವೈ.ಎ. ನಾರಾಯಣ ಸ್ವಾಮಿ, ಚಿದಾನಂದ ಎಂ. ಗೌಡ, ಡಿ.ಎಸ್. ಅರುಣ್, ಕೆ.ಎಸ್. ನವೀನ್ ಅವರುಗಳೂ ಸಹ ಉಪಾಧ್ಯಕ್ಷರುಗಳಾಗಿದ್ದಾರೆ. 

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಡಗೂರು ಸ್ವಾಗತಿ ಸಮಿತಿ ಗೌರವಾಧ್ಯಕ್ಷರಾಗಿದ್ದು, ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ಫಕೃದ್ದೀನ್ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿಗಳಾಗಿದ್ದಾರೆ.

ಸಂಘದ ರಾಜ್ಯ ಖಜಾಂಜಿ ವಾಸುದೇವ ಹೊಳ್ಳ, ಜಿಲ್ಲಾ ಖಜಾಂಚಿ
ಎನ್.ವಿ. ಬದರಿನಾಥ್ ಸ್ವಾಗತ ಸಮಿತಿ ಖಜಾಂಚಿಗಳಾಗಿದ್ದು,
ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ.ಏಕಾಂತಪ್ಪ, ಸಂಘದ ರಾಜ್ಯ ಸಮಿತಿ ಸದಸ್ಯ ಕೆ. ಚಂದ್ರಣ್ಣ ಸಂಚಾಲಕರುಗಳಾಗಿದ್ದಾರೆ. ಸಂಘದ ರಾಷ್ಟ್ರೀಯ ಮಂಡಳಿ ಸದಸ್ಯ ಎಸ್.ಕೆ. ಒಡೆಯರ್, ವರದಿಗಾರರ ಕೂಟದ ಪ್ರಧಾನ ಕಾರ್ಯದರ್ಶಿ ಡಾ. ಸಿ. ವರದರಾಜ್, ಖಜಾಂಚಿ ಮಧು ನಾಗರಾಜ್ ಸಹ ಸಂಚಾಲಕರುಗಳಾಗಿದ್ದಾರೆ.

ಅಥಣಿ ಎಸ್. ವೀರಣ್ಣ, ಅಣಬೇರು ರಾಜಣ್ಣ ಸೇರಿದಂತೆ ಅನೇಕ ಗಣ್ಯರು, ಹಿರಿಯ ಪತ್ರಕರ್ತರು ಗಳನ್ನೊಳಗೊಂಡಂತೆ 18 ಉಪ ಸಮಿತಿಗಳನ್ನು ರಚಿಸಲಾಗಿದೆ ಎಂದು ಮಂಜುನಾಥ ವಿವರಿಸಿದ್ದಾರೆ.

error: Content is protected !!