ಅಗ್ನಿವೀರ್ ವಾಯು ಸೇನೆಯ ಹುದ್ದೆಗಳ ನೇಮಕಾತಿಗೆ ಅರ್ಜಿ

ದಾವಣಗೆರೆ, ಜ.23- ಭಾರತೀಯ ವಾಯುಪಡೆಯಲ್ಲಿ ಅಗ್ನಿಪಥ್ ಯೋಜ ನೆಯಡಿ ಅಗ್ನಿವೀರ್ ವಾಯು ಸೇನೆಯ ನೇಮಕಾತಿಗಾಗಿ ಅವಿವಾಹಿತ ಯುವಕ, ಯುವತಿಯರಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿದಾರರು ದ್ವಿತೀಯ ಪಿ.ಯು.ಸಿ. (ವಿಜ್ಞಾನ, ವಾಣಿಜ್ಯ ಮತ್ತು ಕಲೆ ವಿಷಯಗಳಲ್ಲಿ) ಅಥವಾ  ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಟ ಶೇ.50 ಮತ್ತು ಇಂಗ್ಲಿಷ್‍ನಲ್ಲಿ ಶೇ.50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. 2 ಜನವರಿ 2004 ರಿಂದ 02 ಜುಲೈ 2007 ರ ನಡುವೆ (ಎರಡು ದಿನಾಂಕಗಳನ್ನು ಒಳಗೊಂಡಂತೆ) ಜನಿಸಿದವರಾಗಿರಬೇಕು. ಅರ್ಜಿ ಸಲ್ಲಿಸಲು ಫೆ.6 ಕೊನೆಯ ದಿನವಾಗಿರುತ್ತದೆ.  ಆಸಕ್ತರು  HYPERLINK “https://agnipathvayu.cdac.in/” \t “_blank” https://agnipathvayu.cdac.in ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.  ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ  ದೂ.ಸಂ: 08192-259446 ಸಂಪರ್ಕಿಸಲು ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ರವೀಂದ್ರ  ಡಿ. ತಿಳಿಸಿದ್ದಾರೆ.

error: Content is protected !!