ನಗರದಲ್ಲಿ ಇಬ್ಬರು ಪುರುಷರ ಶವ ಪತ್ತೆ

ದಾವಣಗೆರೆ, ಜ.23- ಇದೇ ದಿನಾಂಕ ದಿನಾಂಕ 19 ರ ರಾತ್ರಿ ಅಪೂರ್ವ ರೆಸಾರ್ಟ್‌ ಮುಂದಿನ ಹೆಚ್‌.ಪಿ. ಪೆಟ್ರೋಲ್‌ ಬಂಕ್‌ ಹತ್ತಿರ ಎನ್‌.ಹೆಚ್‌-48 ರಸ್ತೆಯಲ್ಲಿ ಸುಮಾರು 30 ವರ್ಷದ ಅಪರಿಚಿತ ಪುರುಷನ ಶವ ಪತ್ತೆ ಯಾಗಿದೆ. ಪಾದಾಚಾರಿಯಾದ ಈತನಿಗೆ ವಾಹನವೊಂದು ಅಪಘಾತಪಡಿಸಿ ವಾಹನ ನಿಲ್ಲಿಸದೇ ಹೋಗಿರುತ್ತಾನೆ. ಈತನಿಗೆ ಚಿಕಿತ್ಸೆ ಫಲಕಾರಿಯಾಗದೇ ಈತ ನಿನ್ನೆ ಮೃತಪಟ್ಟಿರುವನು.

ಈತ ಗೋಧಿ ಮೈಬಣ್ಣ ಹೊಂದಿದ್ದು, ತೆಳ್ಳನೆಯ ಮೈಕಟ್ಟು ಹೊಂದಿರುತ್ತಾನೆ. ನೀಲಿ ಬಣ್ಣದ ಟೀ-ಶರ್ಟ್‌, ಕಪ್ಪು ಬಣ್ಣದ ನೈಟ್‌ ಪ್ಯಾಂಟ್‌ ಧರಿಸಿರುತ್ತಾನೆ. ಈತನಿಗೆ ಸಂಬಂಧಿಸಿದ ವ್ಯಕ್ತಿಗಳು ನಗರದ ಗ್ರಾಮಾಂತರ ಪೊಲೀಸ್‌ ಠಾಣೆಯ ಪೊಲೀಸ್‌ ನಿರೀಕ್ಷಕರನ್ನು ಸಂಪರ್ಕಿಸಬಹುದಾಗಿದೆ. ಸಂಪರ್ಕಿಸ ಬೇಕಾದ ದೂರವಾಣಿ ಸಂಖ್ಯೆ : 08192-253100, 08192-262555, ಮೊ: 9480803256, 08192-262550, ಮೊ: 9480803222 ಗೆ ಸಂಪರ್ಕಿಸಲು ಕೋರಲಾಗಿದೆ.

ದಾವಣಗೆರೆ, ಜ.23- ನಗರದ ಮಂಡಿಪೇಟೆ ಬಾದಾಮಿ ಲಾಡ್ಜ್‌ ಗೇಟ್‌ ಮುಂಭಾಗದಲ್ಲಿ ಇಂದು ಮಧ್ಯಾಹ್ನ ಅಪರಿಚಿತ ಪುರುಷ ಶವ ಪತ್ತೆಯಾಗಿದೆ. 

ಸುಮಾರು 35 ವರ್ಷ ವಯಸ್ಸಿನವನಾದ ಈತ, ಕುರುಚಲು ಗಡ್ಡ ಹಾಗೂ ಮೀಸೆ ಹೊಂದಿದ್ದಾನೆ. ಈತನ ಶಿಶ್ನ/ಮರ್ಮಾಂಗ ಮುಂಜಿ ಆಗಿರುವುದು ಕಂಡು ಬಂದಿದೆ. ಈತನು ತಿಳಿ ಗುಲಾಬಿ ತುಂಬು ತೋಳಿನ ರೆಡಿಮೇಡ್‌ ಶರ್ಟ್‌, ಬಲಗೈಯಲ್ಲಿ ಕೆಂಪು ಬಣ್ಣದ ದಾರ, ರಬ್ಬರ್ ಬ್ಯಾಂಡ್‌, ಬಲಗೈಯಲ್ಲಿ ಲೋಹದ ಉಂಗುರ ತೊಟ್ಟಿರುತ್ತಾನೆ. ಮೃತನ ಚಹರೆ ಮೇರೆಗೆ ಆತನು ಚಿಂಧಿ ಆಯುವವನಿ ರಬಹುದೆಂದು ಕಂಡು ಬಂದಿದೆ.  ಈತನಿಗೆ ಸಂಬಂಧಿಸಿದ ವ್ಯಕ್ತಿಗಳು ನಗರದ ಬಸವನಗರ ಪೊಲೀಸ್‌ ಠಾಣೆಯ ಪೊಲೀಸ್‌ ನಿರೀಕ್ಷಕರನ್ನು ಸಂಪರ್ಕಿಸಬಹುದು. ವಿವರಕ್ಕ ಸಂಪರ್ಕಿಸಿ. : 9480803246, 08192-272009.

error: Content is protected !!