ನಗರದ ಕಾವೇರಮ್ಮ ಪ್ರೌಢಶಾಲೆಯಲ್ಲಿ ಇಂದು ತಾಲ್ಲೂಕು ಕಸಾಪ ದತ್ತಿ ಉಪನ್ಯಾಸ

ನಗರದ ಕಾವೇರಮ್ಮ ಪ್ರೌಢಶಾಲೆಯಲ್ಲಿ ಇಂದು ತಾಲ್ಲೂಕು ಕಸಾಪ ದತ್ತಿ ಉಪನ್ಯಾಸ

ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಮತ್ತು ಕಾವೇರಮ್ಮ ಪ್ರೌಢಶಾಲೆ ಹಾಗೂ ಹಿರಿಯ ನಾಗರಿಕರ ಸಹಾಯವಾಣಿ ಇವರುಗಳ ಸಹಯೋಗದಲ್ಲಿ ಶಾಲಾ-ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವದ ಅಂಗವಾಗಿ ದತ್ತಿ ಉಪನ್ಯಾಸ ಕಾರ್ಯಕ್ರಮದಡಿ ಇಂದು ಬೆಳಿಗ್ಗೆ 11 ಗಂಟೆಗೆ ಕಾವೇರಮ್ಮ ಪ್ರೌಢಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಚಂದ್ರಪ್ಪ ಎಸ್‌.ಪಿ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದಲ್ಲಿ ಗಂಗಾಧರ ಬಿ.ಎಲ್‌. ನಿಟ್ಟೂರು ಇವರಿಂದ `ಕನ್ನಡ ಸಾಹಿತ್ಯಕ್ಕೆ ರಾಷ್ಟ್ರಕವಿ ಕುವೆಂಪು ಅವರ ಕೊಡುಗೆ’ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ. 

ಮುಖ್ಯ ಅತಿಥಿಗಳಾಗಿ ಶ್ರೀಮತಿ ಜಯಪ್ಪ, ಶ್ರೀಮತಿ ಮಮತಾ, ನವೀನ್‌ಕುಮಾರ್‌ ಆಗಮಿಸುವರು. ಶ್ರೀಮತಿ ನಾಗವೇಣಿ ಪ್ರಾಸ್ತಾವಿಕ ನುಡಿಗಳನ್ನಾಡುವರು.

ಕಾರ್ಯಕ್ರಮದಲ್ಲಿ ಶ್ಯಾಗಲೆ ಶ್ರೀಮತಿ ಗಂಗಮ್ಮ ಶ್ರೀ ಬಿಸ್ತನಹಳ್ಳಿ ಮಲ್ಲಪ್ಪ ದತ್ತಿಯನ್ನು ದತ್ತಿ ದಾನಿಗಳಾದ ಶ್ರೀಮತಿ ಗಿರಿಜ ಬಿ.ಎಂ. ಸದಾಶಿವಪ್ಪ ಶ್ಯಾಗಲಿ ನಡೆಸಿಕೊಡುವರು. ಶ್ರೀಮತಿ ಅನ್ನಪೂರ್ಣ್ಮ ಶ್ರೀ ಅ.ರಾ.ಶಂಕರಯ್ಯ ದತ್ತಿಯನ್ನು ದತ್ತಿ ದಾನಿಗಳಾದ ಶ್ರೀಮತಿ, ಶ್ರೀ ನಾಗಭೂಷಣ್‌ ಮತ್ತು ಸಹೋದರರು ನಡೆಸಿಕೊಡುವರು. ಶ್ಯಾಗಲೆ ಶ್ರೀಮತಿ ನಾಗಮ್ಮ ಬಸವಾಪಟ್ಟಣದ ಹಾಲಪ್ಪ ದತ್ತಿಯನ್ನು ದತ್ತಿ ದಾನಿಗಳಾದ ನಂಜಪ್ಪ ಬಿ.ಹೆಚ್‌. ಮತ್ತು ಸಹೋದರರು, ಶ್ಯಾಗಲೆ ಇವರು ನಡೆಸಿಕೊಡುವರು.

error: Content is protected !!