ಆಹಾರ ಕೂಡ ಒಂದು ವಿಜ್ಞಾನ : ಎಂ.ಜಿ.ಈಶ್ವರಪ್ಪ

ಆಹಾರ ಕೂಡ ಒಂದು ವಿಜ್ಞಾನ : ಎಂ.ಜಿ.ಈಶ್ವರಪ್ಪ

ದಾವಣಗೆರೆ, ಜ. 19- ಆಹಾರ ಕೂಡ ಒಂದು ವಿಜ್ಞಾನ ವಿದ್ದಂತೆ. ರುಚಿಕರ, ಪುಷ್ಟಿದಾಯಕ ಮತ್ತು ಆರೋಗ್ಯಕರವಾಗಿರಬೇಕು. ಆಹಾರ ತಯಾರಿಕೆ ಕೂಡ ವಿದ್ಯಾರ್ಥಿಗಳಿಗೆ ಜೀವನೋಪಾಯಕ್ಕೆ ಸಹಕಾರಿಯಾಗ ಬಹುದು ಎಂದು ಬಾಪೂಜಿ ವಿದ್ಯಾಸಂಸ್ಥೆ ಶೈಕ್ಷಣಿಕ ನಿರ್ದೇಶಕ ಡಾ. ಎಂ.ಜಿ. ಈಶ್ವರಪ್ಪ ಹೇಳಿದರು.

ನಗರದ ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನಲ್ಲಿ ಕಳೆದ ವಾರ ನಡೆದ ಆಹಾರ ಮೇಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆಹಾರ ಕೇವಲ ನಾಲಿಗೆ ರುಚಿಗೆ ಸೀಮಿತವಾಗದೇ ಆರೋಗ್ಯಕ್ಕೆ ಪೂರಕವಾಗಿರಬೇಕು. ವಿದ್ಯಾರ್ಥಿಗಳು ಸಹ ಖುಷಿಯಿಂದ ಆಹಾರ ಮೇಳದಲ್ಲಿ ಪಾಲ್ಗೊಂಡು ಹೊಸ ಬಗೆಯ ಆಹಾರ ಪದಾರ್ಥಗಳನ್ನು ತಯಾರಿಸುವ ಪ್ರಯತ್ನದಲ್ಲಿ ಆಸಕ್ತಿ ತೋರಿರುವುದು ಸಂತಸದ ವಿಚಾರ ಎಂದರು.

ಗೃಹ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಂಡು, ತರಗತಿಯಲ್ಲಿ ಕಲಿಯುವ ವಿದ್ಯಾರ್ಥಿಗಳು ಹೊರ ಬಂದು ಶ್ರಮವಹಿಸಿ ಬಗೆ ಬಗೆಯ ಆಹಾರ ಪದಾರ್ಥಗಳನ್ನು ತಯಾರಿಸಿದ್ದಾರೆ. ತನ್ಮೂಲಕ ಮಾರುಕಟ್ಟೆ ವ್ಯವಸ್ಥೆ ಮತ್ತು ವ್ಯವಹಾರ ಜ್ಞಾನ ವೃದ್ಧಿಯಾಗಲು ಈ ಮೇಳ ಹೆಚ್ಚು ಉಪಯುಕ್ತವಾಗಲಿದೆ ಎಂದು ಹೇಳಿದರು.

ಬಾಪೂಜಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷೆ ಕಿರುವಾಡಿ ಗಿರಿಜಮ್ಮ, ಕಾಲೇಜಿನ ಪ್ರಾಚಾರ್ಯರಾದ ಕಮಲಾ ಸೊಪ್ಪಿನ ಮಾತನಾಡಿದರು. 

ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ರಮೇಶ್ ದೂಪದಹಳ್ಳಿ, ತೀರ್ಪುಗಾರರಾದ ಕನ್ನಿಕಾ ಸಾನ್ವಿ, ಸುಮ ನಂಜುಂಡಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!