ಚನ್ನಗಿರಿ ವಿರೂಪಾಕ್ಷಪ್ಪ ವನಜಾಕ್ಷಮ್ಮ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಚನ್ನಗಿರಿ ರಾಧಮ್ಮ ರಂಗಪ್ಪ ಇಂಗ್ಲಿಷ್ ಮೀಡಿಯಂ ನರ್ಸರಿ ಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನು ಇಂದು ಬೆಳಿಗ್ಗೆ 10 ಗಂಟೆಗೆ ಗಡಿಯಾರ ಕಂಬದ ಹತ್ತಿರವಿರುವ ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಅಧ್ಯಕ್ಷತೆಯನ್ನು ಆರ್.ಎಸ್. ನಾರಾಯಣಸ್ವಾಮಿ ವಹಿಸುವರು. ಮುಖ್ಯ ಅತಿಥಿಗಳಾಗಿ ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶೇರ್ ಅಲಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಕಾರ್ಯದರ್ಶಿ ಎಂ. ಗುರುಸಿದ್ಧಸ್ವಾಮಿ ಆಗಮಿಸುವರು.