ಮಲೇಬೆನ್ನೂರು ತಲುಪಿದ ಭದ್ರಾ ನಾಲೆ ನೀರು

ಮಲೇಬೆನ್ನೂರು ತಲುಪಿದ ಭದ್ರಾ ನಾಲೆ ನೀರು

ಮಲೇಬೆನ್ನೂರು, ಜ.18- ಭದ್ರಾ ಜಲಾಶಯದಿಂದ ಬೇಸಿಗೆ ಹಂಗಾಮಿಗೆ ಬಲದಂಡೆ ನಾಲೆಗೆ ಬಿಡುಗಡೆ ಮಾಡಿರುವ ನೀರು ಗುರುವಾರ ಬೆಳಿಗ್ಗೆ ಕೊಮಾರನಹಳ್ಳಿ ಕಾಲುವೆಯಲ್ಲಿ ಹರಿದು ಬಂದಿತು. ಸಂಜೆ ವೇಳೆಗೆ ಈ ನೀರು ಮಲೇಬೆನ್ನೂರು ಭಾಗಕ್ಕೆ ತಲುಪಿದ್ದು, ತೋಟದ ಬೆಳೆಗಾರರು ನೀರನ್ನು ತಮ್ಮ ಹೊಲಗಳಿಗೆ ಹರಿಸಿಕೊಳ್ಳಲಿದ್ದಾರೆ.

ಗುರುವಾರ ಬೆಳಿಗ್ಗೆ ಮಾಹಿತಿ ಪ್ರಕಾರ ಬಲದಂಡೆ ನಾಲೆೆ 2650 ಕ್ಯೂಸೆಕ್ಸ್ ಮತ್ತು ಎಡದಂಡೆ ನಾಲೆಗೆ 380 ಕ್ಯೂಸೆಕ್ಸ್ ನೀರನ್ನು ಬೀಡಲಾಗಿದ್ದು, ಈ ನೀರು ಜ.27 ರವರೆಗೆ ನಾಲೆಯಲ್ಲಿ ಹರಿಯಲಿದೆ. ನಂತರ 20 ದಿವಸ ಬಂದ್ ಮಾಡಿ, ಪುನಃ 13 ದಿವಸ ನೀರು ಹರಿಸಲಾಗುವುದು.

error: Content is protected !!